ಚಳ್ಳಕೆರೆ : ನೂರು ಹಾಸಿಗೆಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದೂರುಗಳ ಮೇರೆಗೆ ದೀಡಿರ್ ದಾವಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಆಸ್ಪತ್ರೆಯಲ್ಲಿನ ಶುಚಿತ್ಚ ಹಾಗೂ ಹೆರಿಗೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.
ಗ್ರಾಮೀಣ ಪ್ರದೇಶಗಳಿಂದ ವಿವಿಧ ಸಮಸ್ಯೆಗಳ ಮೂಲಕ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವ ಖಾಸಗಿ ಆಸ್ಪತ್ರೆಗಿಂತ ಕಮ್ಮಿ ಇಲ್ಲದಂತೆ ಸೇವೆ ನೀಡಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್ಗೆ ಭೇಟಿ ನೀಡಿ ಇಲ್ಲಿ ದಿನಂಪ್ರತಿ ದಾಖಲಾಗುವಂತೆ ಪ್ರಸೂತಿ ಪ್ರಕರಣಗಳ ಪರಿಶೀಲನೆ ಮಾಡಿದರು.
ಸರಾಸರಿ ಶೇಕಡ 70ರಷ್ಟು ಪ್ರಕಣಗಳು ಸಹಜ ಹೆರಿಗೆ ಆಗುತ್ತಿದ್ದು ಶೇಕಡ 30 ರಷ್ಟು ಪ್ರಕರಣಗಳು ಶಸ್ತ್ರಚಿಕಿತ್ಸೆ ಒಳಪಟ್ಟು ಹೆರಿಗೆ ಮಾಡಿಸಲಾಗುತ್ತಿದೆ. ದಾಖಲೆಗಳ ಪರಿಶೀಲನೆ ಇಂದು ಕಂಡು ಬಂತು ಹಾಗೆಯೇ ಹೆರಿಗೆ ವಾರ್ಡ್ ಅಲ್ಲಿನ ಶೌಚಾಲಯಗಳು ಸ್ವಚ್ಚತೆ ಇಲ್ಲದೆ ಇರುವುದರಿಂದ ನಿರ್ವಹಣೆಯಲ್ಲಿ ಇದ್ದಂತೆ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸಿಬ್ಬಂದಿಗಳು ಸರ್ಕಾರಿ ವ್ಯವಸ್ಥೆ ಮೇಲೆ ಗೌರವ ಹಾಗೂ ನಂಬಿಕೆಯನ್ನು ಹುಟ್ಟಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಇನ್ನು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮ ಸೇವೆ ಕೊಡುತ್ತಾರೆ ಹಾಗೆಯೇ ಸರ್ಕಾರಿ ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯಗಳು ಖಾಸಗಿ ಆಸ್ಪತ್ರೆಗೆ ಏನು ಕಡಿಮೆ ಇಲ್ಲ ಇದನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸಬೇಕು. ನಂಬಿಕೆ ಹುಟ್ಟಿಸಬೇಕು ಈಗ ಕೊಡುತ್ತಿರುವ ಸೇವೆಗಳ ಜೊತೆಗೆ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಪ್ರತಿ ಗಂಟೆಗೊಮ್ಮೆ ಶೌಚಾಲಯ ಮತ್ತು ಆವರಣಗಳನ್ನು ಸ್ವಚ್ಛ ಮಾಡಬೇಕು ಎಂದು ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಪ್ರಸೂತಿ ವೈದ್ಯಾಧಿಕಾರಿ ಡಾಕ್ಟರ್ ಶಮಾ ಪರ್ವೀನ್ ಆಸ್ಪತ್ರೆಯ ಸಿಬ್ಬಂದಿಗಳು ಸಹಾಯಕ ಆರೋಗ್ಯ ಅಧಿಕಾರಿತಿಪ್ಪೇ ಸ್ವಾಮಿ ಆರೋಗ್ಯ ಸಹಾಯಕಿಯರು ಸಿಬ್ಬಂದಿಗಳು ಇದ್ದರು.