ಚಳ್ಳಕೆರೆ ; ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿದರು.
ಸಂಸ್ಥೆ ಕಾರ್ಯದರ್ಶಿ ಜೆ.ಸಿ.ಶಶಿಕುಮಾರ ಮಾತನಾಡಿ, ಇಂದು ಪರಿಸರ ರಕ್ಷಣೆ ಅತಿಮುಖ್ಯವಾಗಿದೆ. ಸಸಿನೆಟ್ಟು ಪೋಷಣೆ ಮಾಡುವುದು ಪ್ರಸ್ತುತ ಅನಿರ್ವಾಯವಾಗಿದೆ. ಜಾಗತಿಕ ತಾಪಮಾನ ಹೆಚ್ಚಳವಾಗದಂತೆ ಕಾಪಾಡಲು ಪರಿಸರ ಅತಿ ಮುಖ್ಯವೆಂದರು.
ಪತ್ರಕರ್ತ ಕೆ.ದುರುಗೇಶ್ ಮಾತನಾಡಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕು. ಇಂದು ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಅನಿರ್ವಾಯತೆ ಹೆಚ್ಚಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಬಿ.ಮಮತ, ಬಿ.ರಮ್ಯ, ಸ್ಪೂರ್ತಿ, ಯಶೋಧಮ್ಮ ಮೊದಲಾದವರು ಇದ್ದರು.