ಚಳ್ಳಕೆರ : ಪರಶುರಾಂಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಪರಿಗಣಿಸುವಂತೆ ಜನಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಪರಶುರಾಂಪುರ ಶಾಖೆ ಇವರು ಅನಿರ್ದಿಷ್ಟ ಕಾಲ ಮುಷ್ಕರ ಹೂಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದ್ದಾರೆ
ಕಳೆದ 20 ವರ್ಷದಿಂದ ಈ ಬೇಡಿಕೆಯನ್ನು ನಿರಂತರವಾಗಿ ಶಾಸಕರು ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಸಲ್ಲಿಸುತ್ತಾ ಬಂದಿದ್ದೇವೆ, ಇದಲ್ಲದೆ ತಾಲೂಕಿನಲ್ಲಿರುವ ರೈತರಿಗೆ ಬೆಳೆ ವಿಮೆ ಸಂದಾಯವಾಗಿಲ್ಲ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ ವೆಂದು ಪಟ್ಟು ಹಿಡಿದಿದ್ದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ ಸರ್ಕಾರದ ಮಟ್ಟದಲ್ಲಿ ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಪರಿಗಣಿಸಲು ಪರಿಶೀಲನೆ ಹಂತದಲ್ಲಿದೆ,
ಬೆಳೆ ವಿಮೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಂಬಂಧಿಸಿದ ಕಂಪನಿಯ ಜನರೊಂದಿಗೆ ಮಾತನಾಡಿ ಹಾಗೂ ಸಭೆ ಮಾಡಿ ಒಂದು ತಿಂಗಳ ಒಳಗಾಗಿ ಹಣವನ್ನು ರೈತರ ಖಾತೆಗೆ ಹಾಕುವಂತೆ ಸೂಚನೆ ನೀಡಿದ್ದಾರೆ.
ಅದರಂತೆ ಯಾವುದೇ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಮತ್ತು ರೈತರಿಗೋಸ್ಕರ ತಾಲೂಕಿನಲ್ಲಿ ಈಗಾಗಲೇ 67 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಪರಿಹಾರ ನೀಡಲಾಗಿದೆ.
ದಾರಿ ಸ್ಮಶಾನ ಮುಂತಾದ ಸಮಸ್ಯೆಗಳನ್ನು ನೇರವಾಗಿ ಗ್ರಾಮಕ್ಕೆ ಹೋಗಿ ಬಗೆಹರಿಸಲಾಗುತ್ತಿದೆ, ಅತಿ ಮಳೆಯಿಂದ ನಷ್ಟವಾದ ಎಲ್ಲಾ ರೈತರಿಗೂ ಈಗಾಗಲೇ ಪರಿಹಾರ ನೀಡಲಾಗಿದೆ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲೂಕಿನ ಸುಮಾರು 40 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ.
ಉಳಿದಂತೆ ಎಲ್ಲಾ ಗ್ರಾಮಗಳನ್ನು ಕೂಡ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುತ್ತಿದೆ ರೈತರ ಹಿತಕಾಯುವ ದೃಷ್ಟಿಯಲ್ಲಿ ಈಡಿ ತಾಲೂಕಾಡಳಿತ ರೈತರೊಂದಿಗೆ ಇದೆ ಈ ಮುಷ್ಕರವನ್ನು ಕೈ ಬಿಡುವಂತೆ ಮನವಿ ಮಾಡಿದರು