ಚಳ್ಳಕೆರೆ : ಈದೆ ತಿಂಗಳ ಜೂನ್ 3 ರಂದು ಜರುಗಬೇಕಿದ್ದ ಮದಕರಿ ರಥಯಾತ್ರೆ ರದ್ದುಗೊಳಿಸಿರುವ ಬಗ್ಗೆ ಕಾರಣ ವಾಲ್ಮೀಕಿ ಶ್ರೀಗಳು ಫ್ರೀಡಂ ಪಾರ್ಕಿನಲ್ಲಿ 7.5%ಮೀಸಲಾತಿಗಾಗಿ ಧರಣಿ ಕುಳಿತಿದ್ದಾರೆ
ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ಮದಕರಿ ನಾಯಕ ರಥಯಾತ್ರೆ ಮಾಡುವುದು ಸೂಕ್ತವಲ್ಲ 7.5 ಮೀಸಲಾತಿ ಬಿಜೆಪಿ ಸರ್ಕಾರ ಕೊಟ್ಟ ನಂತರ ಸರ್ಕಾರದ ವತಿಯಿಂದಲೇ ವಿಜಯೋತ್ಸವ ಆಚರಿಸಿ ರಥಯಾತ್ರೆ ಮಾಡಲಾಗುವುದು,
ಸಮಾಜದ ಎರಡು ಕಣ್ಣುಗಳು ವಾಲ್ಮೀಕಿ ಪ್ರಸನ್ನಾಂದ ಸ್ವಾಮಿಗಳು ಹಾಗೂ ಶ್ರೀರಾಮುಲುರವರು ಅವರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ,
ಜವಾಬ್ದಾರಿಯುತವುಳ್ಳವರು ನಾಯಕ ಸಮಾಜಕ್ಕಾಗಿ ಕಳಕಳಿವುಳ್ಳವರು,7.5ಮೀಲಾತಿಗಾಗಿ ಇಬ್ಬರೂ ಶ್ರಮವಹಿಸುತ್ತಿದ್ದಾರೆ ಧರಣಿ ನಿರತ ವಾಲ್ಮೀಕಿಸ್ವಾಮೀಜಿಗಳಿಗೆ ಆಗಲಿ ರಾಜ್ಯಸಚಿವ ಸಂಪುಟದ ಶ್ರೀರಾಮುಲುರವರಿಗೆ ಆಗಲಿ ಅವಹೇಳನ ಮಾಡಬೇಡಿ ಗೌರವಯುತವಾಗಿ ಕಾಣಿ ಎಂದು ನಾಯಕ ಸಮಾಜದ ಬಂಧುಗಳಲ್ಲಿ ಬಿಜೆಪಿ ಮುಖಂಡರಾದ ಸೋಮು ಮನವಿ ಮಾಡಿಕೊಂಡರು,
ಸರ್ಕಾರ ಮೀಸಲಾತಿ ಕೊಡುತ್ತದೆಂಬ ಭರವಸೆಯಿಂದ ಎಲ್ಲರೂ ಕಾಯತ್ತಾ ಇದ್ದಾರೆ ಈ ನಿರೀಕ್ಷೆ ಬಿಜೆಪಿಯು ಸುಳ್ಳು ಮಾಡದು ಎಂದು ಹೇಳಿದರು
ಸಂಧರ್ಭದಲ್ಲಿ
ನಗರಸಭೆ ಸದಸ್ಯರು ವೆಂಕಟೇಶ್, ಬಿಜೆಪಿ ಮುಖಂಡರಾದ ಸೋಮು, ಚಿತ್ರದುರ್ಗ ಗ್ರಾಮಾಂತರ ಪ್ರಧಾನಕಾರ್ಯದರ್ಶಿ ವಸಂತ್ ಕುಮಾರ್ TS, ಪಾಪೇಶ್ ನಾಯಕ ನೂತನ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಪಿ. ಶಿವಣ್ಣ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷರು, ಮಾರುತಿ. NL ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ, ಸಿ ಬಿ ಮೋಹನ್ ನಾಯಕನಹಟ್ಟಿ ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷರು, ನಾಯಕನಹಟ್ಟಿ ಮಂಡಲ ಪ್ರಧಾನಕಾರ್ಯದರ್ಶಿ ಬೆಂಕಿ ಗೋವಿಂದ್, ಹಾಜರಿದ್ದರು