ಚಳ್ಳಕೆರೆ : ಇಂದಿನ ದಿನಮಾನಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಸ್ನೇಹಿತರ ಜೊತೆಗೆ ದೊಡ್ಡ ದೊಡ್ಡ ಪೈ ಸ್ಟಾರ್ ಪಂಬ್ ,ಹೋಟೆಲ್ ಗಳಲ್ಲಿ ಆಚರಿಸುವುದು ನೋಡಿದ್ದೆವೆ ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ

ತನ್ನ ಹುಟ್ಟು ಹಬ್ಬವನ್ನು ಆಸ್ಪತ್ರೆಯ ರೋಗಿಗಳೊಟ್ಟಿಗೆ ಹಾಲು ಬ್ರೆಡ್ ನೀಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ

ಚಳ್ಳಕೆರೆ ನಗರದ ಲಿಂಗಾಯತ ಸಮಾಜದ ರಾಜ್ಯಧ್ಯಕ್ಷರಾದ ಹಾಗೂ ನಾಯಕ‌ ನಟನಾದ ಗುರುರಾಜ್ ಹೂಗಾರ್ ತಮ್ಮ ಹುಟ್ಟುಹಬ್ಬವನ್ನುವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.

ನಗರದ ಸಾರ್ವಜನಿಕ ಆಸ್ವತ್ರೆಯಲ್ಲಿ ರೋಗಿಗಳು, ಹಾಗೂ ನರ್ಸ್ ಗಳೊಟ್ಟಿಗೆ ಸುಮಾರು 250 ರೋಗಿಗಳಿಗೆ ಬ್ರೆಡ್ ಹಾಲು ವಿತರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಇಷ್ಟೇ ಅಲ್ಲದೇ ಜೊತೆಗೆ ನಗರದ ಬನಶ್ರೀ ವೃದ್ಧಆಶ್ರಮಕ್ಕೆ ಭೇಟಿ ನೀಡಿ ವೃದ್ಧರಿಗೂ ಸಹ ಬ್ರೆಡ್ ಹಾಲು ವಿತರಿಸಿ ಅವರ ಜೊತೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನಿಸರ್ಗ ದೇವಲಪರ್ಸ್ ಶ್ರೀರಾಮುಲು, ಗೊಂಚಿಗಾರ ಪಾಪಣ್ಣ, ಗೌಡ್ರ ಶಿವಕುಮಾರ, ಜಗದೀಶ್ ಆಚಾರ್ಯ, ಅಶೋಕ್ , ಲೆಕ್ಕಧಿಕಾರಿ ಆನಂದ ಜಿ ಕೆ, ರಾಜು ಶ್ರೀಧರ ಗೌಡ್ರ, ತಿಪ್ಪಣ್ಣ, ಶರಣಪ್ಪ , ಕರಿಬಸಣ್ಣ , ಪಂಚಣ್ಣ, ರೈಸ್ ಮಿಲ್ಲ ಮಲ್ಲಜ್ಜ ಪ್ರಭಾಕರ ಹಾಗೂ ಕರ್ನಾಟಕ ರಾಜ್ಯ ತೋಟಗಾರಿಕೆ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಜಿ ಎಸ್ ಮತ್ತು ಹೂಗಾರ ಅಭಿಮಾನಿ ಬಳಗ, ರಾಜ್ಯದ ವೀರಶೈವ ಲಿಂಗಾಯತ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!