ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಕಾರ್ತೀಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು.

ಮಾರ್ಗಶಿರ ಮಾಸದಲ್ಲಿ ಜರುಗುವ ಕಡೆಯ ಕಾರ್ತಿಕೋತ್ಸವಕ್ಕೆ ಸುತ್ತಲಿನ ಹಲವು ಗ್ರಾಮದ ಭಕ್ತರು ಸಾಕ್ಷಿಕರಿಸಿದ್ದಾರೆ.

ಗ್ರಾಮದ ಪುರಾತನ ದೇವಸ್ಥಾನದಿಂದ ಹೊರಟ ಶ್ರೀ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದ ರಥೋತ್ಸವ‌ ಬಹು ದೂರದ ಪಾದಗಟ್ಟೆಯವರೆಗೆ ನೂರಾರು ಭಕ್ತರು ವಿವಿಧ ಸಾಂಸ್ಕೃತಿಕ ವಾದ್ಯ ಗೊಳೊಂದಿಗೆ ನಂದಿಕೋಲು, ಡೊಳು ಕುಣಿತ, ಹೆಂಗಳೆಯರ ದೀಪೋತ್ಸವದ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು, ನಂತರ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಶ್ರೀ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ ನಡೆಯಿತು, ಸಂಜೆ ವೇಳೆ ಓಕುಳಿ ಹಾಕುವ ಮೂಲಕ ತೆರೆಕಂಡಿತು ‌

ಇನ್ನೂ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಸೂರನಹಳ್ಳಿ‌ ಪ್ರೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು ,

ತಾಲೂಕು ಬಿಜೆಪಿ ಮಂಡಲ‌ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸರ ಸಹಾಯಹಸ್ತದ ಮೂಲಕ ಪ್ರಥಮ ಬಹುಮಾನ 25000, ಸಾ,
ದ್ವಿತೀಯ ಬಹುಮಾನ 15000 ಸಾ. ಇಡಲಾಗಿತ್ತು.

ಇನ್ನೂ ಸೂರನಹಳ್ಳಿ ಕಿಂಗ್ ರೈಡರ್ಸ್ ಪ್ರಥಮ ಬಹುಮಾನ ಪಡೆದರು, ಟಗರು ಚಾಲೆಂಜರ್ಸ್ ರನ್ನರ್ ಆಪ್ ಹಾಗಿ ಬಹುಮಾನ ಪಡೆದರು.

About The Author

Namma Challakere Local News
error: Content is protected !!