ಚಳ್ಳಕೆರೆ : 2025 ರ ನೂತನ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಬ್ರೇಕ್…?

ಸಾರ್ವಜನಿಕ ಸ್ಥಳದಲ್ಲಿ
ರಾತ್ರಿ ವೇಳೆ ಪಾರ್ಟಿ ಮೊಜು ಮಸ್ತಿ ನಿಷೇಧ : ಡಿವೈಎಸ್ಪಿ ಬಿಟಿ.ರಾಜಣ್ಣ ಖಡಕ್ ಸೂಚನೆ

ಚಳ್ಳಕೆರೆ : 2025 ರ ನೂತನ ಹೊಸ ವರ್ಷವನ್ನು ನಿಮ್ಮ ಕುಟುಂಬದ ಜೊತೆಗೆ ಸರಳವಾಗಿ ತಾವಿದಲ್ಲೆಯೇ ಆಚರಿಸಿ ಎಂದು ಡಿವೈಎಸ್ ಪಿ ಬಿಟಿ. ರಾಜಣ್ಣ ಕರೆ ನೀಡಿದ್ದಾರೆ.

ಅವರು ನಮ್ಮ ಚಳ್ಳಕೆರೆ ವೆಬ್ ಪೋರ್ಟಲ್ ನೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಿತ ರಕ್ಷಣೆಗೆ
ಪೊಲೀಸರು ಕಟಿಬದ್ದರಾಗಿದ್ದಾರೆ, 2025ರ ನೂತನ ವರ್ಷಚಾರಣೆಗೆ
ಮೊಜು ಮಾಸ್ತಿ ಮಾಡಲು ಅವಕಾಶ ಇಲ್ಲವಾಗಿದೆ, ಪೊಲೀಸ್ ಇಲಾಖೆ ಯಿಂದ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ,

ಮಧ್ಯ ರಾತ್ರಿ 12.30 ಕ್ಕೆ ಸಾರ್ವಜನಿಕರ ಸುಖಾ ಸುಮ್ಮನೆ ಓಡಾಟ ನಿಷೇಧಿಸಲಾಗಿದೆ, ಇನ್ನೂ ಮೊಳಕಾಲ್ಮೂರು ತಾಲೂಕಿನಲ್ಲಿ ನುಕ್ಕಿಮಲೆ ಬೆಟ್ಟ, ಗವಿಸಿದ್ದೇಶ್ವರ ಬೆಟ್ಟ, ರಂಗಯ್ಯನ ಗಿರಿದಾಮ, ಅರಣ್ಯ ವಲಯ, ಉದ್ಯಾನ ವನಗಳಲ್ಲಿ ರಾತ್ರಿವೇಳೆ ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ, ಅದೇ ರೀತಿಯಲ್ಲಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಯ ಹೊಸ ಗುಡ್ಡ, ಕಾಯ್ದಿರಿಸಿದ ಅರಣ್ಯ ಪ್ರದೇಶ, ನಗರದ ಲೇಔಟ್ ಗಳಲ್ಲಿ, ಸೌಂಡ್ ಹಾಕಿಕೊಂಡು ಮೊಜು ಮಸ್ತಿ ಮಾಡುವುದು ನಿಷೇಧ ಮಾಡಲಾಗಿದೆ, ಹಾಗೂ ರಸ್ತೆ ಮೇಲೆ ವೀಲಿಃಂಗ್ ಮಾಡುವುದು ಡ್ರಿಂಕ್ ಅಂಡ್ ಡ್ರೈವ್ ಕಂಡು ಬಂದಲ್ಲಿ ರಸ್ತೆಯಲ್ಲಿ ಬ್ಯಾರಿ ಕೇಡ್ ಅಳವಡಿಸಿ ಪೊಲೀಸರು ತಪಾಸಣೆ ಮಾಡುವುದರ ಮೂಲಕ ಸಾರ್ವಜನಿಕರ ರಕ್ಷಣೆಗೆ ಹಾಗೂ ನೂತನ ವರ್ಷಾಚರಣೆಗೆ ಸಾರ್ವಜನಿಕ ಸ್ಥಳಗಳಿಗೆ ರಾತ್ರಿ ವೇಳೆ ನಿಷೇಧಿಸಲಾಗಿದೆ,

ಇದಕ್ಕೆ ಮೀರಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಕಂಡುಬಂದರೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.

About The Author

Namma Challakere Local News
error: Content is protected !!