ಚಳ್ಳಕೆರೆ:

ಸ್ಥಳೀಯ ಇತಿಹಾಸ ತಿಳಿಸುವಲ್ಲಿ ವೀರಗಲ್ಲು, ಶಾಸನಗಳು
ಮಹತ್ವದ ಕಾರ್ಯನಿರ್ವಹಿಸುತ್ತವೆ. ಅಂತಹ ಇತಿಹಾಸ ಸಾರುವ ವೀರಗಲ್ಲುಗಳಿಗೆ ರಕ್ಷಣೆಯಿಲ್ಲದೆ
ಅವಸಾನದ ಅಂಚಿನಲ್ಲಿವೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದರ ಬೆನ್ನಲ್ಲೇ ಸ್ಥಳಕ್ಕೆ ದಾವಿಸಿದ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಪುರತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳ ತಂಡ ವೀರಗಲ್ಲು ಸ್ಥಳವನ್ನು ಪರೀಶಿಲನೆ ನಡೆಸಿದ್ದಾರೆ.

ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಕೆರೆ ಸಮೀಪದಲ್ಲಿ ಇರುವಂತಹ ವೀರಗಲ್ಲು ಸ್ಥಳವನ್ನು ವಿಕ್ಷಣೆ ಮಾಡಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಅಧಿಕಾರಿ ಪ್ರಲಾದ್ಲ್ ರವರಿಗೆ ‌ರಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಬಯಲು ಸೀಮೆಯಲ್ಲಿ ವಿಶಿಷ್ಟ
ವಿಶಿಷ್ಟ ಶುಷ್ಕ
ಹುಲ್ಲುಗಾವಲು ಪರಿಸರದಲ್ಲಿ ಬರುವ ತಾಲ್ಲೂಕಿನ ದೊಡ್ಡ
ಉಳ್ಳಾರ್ತಿ ಎಂಬ ಗ್ರಾಮದ ಕೆರೆಯ ಹಿಂಭಾಗದಲ್ಲಿ
ವೀರಗಲ್ಲುಗಳಿವೆ. ಗೋರರಕ್ಷಕರು ಗ್ರಾಮಕ್ಕೆ ಬಂದು ಕೆರೆಯ ಸಮೀಪದಲ್ಲಿ
ವಾಸ ಮಾಡಿ ಹೋಗಿದ್ದಾರೆ ಎಂಬುವುದನ್ನು ಸಾರುತ್ತವೆ.
ಎಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.

ನಾಡಿನ ಚರಿತ್ರೆ ಸಾರುವ, ಚಾಲುಕ್ಯರು, ಹಾಗೂ ನೊಳಂಬ ಕಾಲದಲ್ಲಿ ಗೋ ರಕ್ಷಕರ ಕುರುವಾಗಿ ಇರುವ ಶಾಸನ-ವೀರಗಲ್ಲುಗಳು ತಾಲ್ಲೂಕಿನ ಕೆಲವಡೆ ಬೆಳಕಿಗೆ ಬಂದಿದ್ದು, ಮುಂದಿನ
ಪೀಳಿಗೆಗಾಗಿ ಅವುಗಳ ರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ , ವೀರಗಲ್ಲು ರಕ್ಷಣೆಗೆ ಸುತ್ತಲೂ ತಡೆಗೊಡೆಯಂತೆ ತಂತಿ ಬೆಲಿ ಹಾಗು ರಕ್ಷಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

About The Author

Namma Challakere Local News

You missed

error: Content is protected !!