ಚಳ್ಳಕೆರೆ ಸುದ್ದಿ :

ಅದ್ದೂರಿಯಾಗಿ ಜರುಗಿದ ಕೋಡಿಹಳ್ಳಿಯ ಶ್ರೀ ಶರಣ ಬಸವೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿಯ ರಥೋತ್ಸವ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು,ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವದ ರಥೋತ್ಸವವು ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ನಂತರ ಬೆಳಿಗ್ಗೆ 08 ಗಂಟೆಗೆ ರಥೋತ್ಸವಕ್ಕೆ ಬಣ್ಣ ಬಣ್ಣದ ಬಾವುಟಗಳಿಂದ, ಹೂವಿನ ಹಾರಗಳಿಂದ,ರಥವನ್ನು ಶೃಂಗಾರ ಮಾಡಲಾಯಿತು.
ಆನಂತರ ಸುಮಾರು 10 ಗಂಟೆಗೆ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು..

ಇನ್ನು ಗ್ರಾಮದ ಭಾರೀ ವಂಶಸ್ಥರಾದ ಶ್ರೀಮತಿ ವೀರಮ್ಮ ವಜ್ರಪ್ಪ ಮತ್ತು ಮಕ್ಕಳ ಕುಟುಂಬದ ವತಿಯಿಂದ ಬಲಿ ಅನ್ನ, ಕಾಸು ಮೀಸಲು ತುಂಬಾ ಮೊಸರು, ಜಿನಿಗಿ ಹಾಲು ತಂದು ಶ್ರೀ ಬಸವೇಶ್ವರ ಸ್ವಾಮಿ ತೇರಿನ ಚಕ್ರಗಳಿಗೆ ಎಡೆ ಹಾಕಲಾಯಿತು ನಂತರ ಮಹಾ ಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ಹಾಗೂ ಮುಖಂಡರು ರಥೋತ್ಸವಕ್ಕೆ ಚಾಲನೆ ನೀಡಿದರು , ಭವ್ಯವಾದ ಮೆರವಣಿಗೆಯು ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಕೀಲು ಕುದುರೆ, ಹೂವು ದವನ ಹಣ್ಣು ಕಾಯಿ ಸ್ವಾಮಿಗೆ ಮತ್ತು ರಥೋತ್ಸವಕ್ಕೆ ಭಕ್ತರು ಸಮರ್ಪಿಸಿದರು, ಮಂಗಳ ವಾದ್ಯಗಳೊಂದಿಗೆ ಗ್ರಾಮದ ಕೆರೆಕಟ್ಟೆಯ ಸಮೀಪ ಇರುವ ಪಾದಗಟ್ಟೆ ಬಳಿ ಸೇರಿತು..
ಈ ಬಾರಿಯ ಮುಕ್ತಿ ಬಾವುಟವನ್ನು ಸೂರಯ್ಯನವರ ಪುತ್ರರಾದ ತಿಪ್ಪೇಸ್ವಾಮಿ ರವರು ಹರಾಜಿನಲ್ಲಿ ತಮ್ಮದಾಗಿ ಸಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

ನಂತರ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖಂಡರಾದ ದೊಡ್ಡ ಓಬಯ್ಯ ಮಾತನಾಡಿ 50 ವರ್ಷಗಳ ನಂತರ ನಮ್ಮ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿರುವುದು ಅತ್ಯಂತ ಸಂತಸದ ವಿಷಯ ಒಂದೆಡೆಯಾದರೆ,ಮೂರು ದಿನಗಳ ಹಿಂದೆ ನಮ್ಮ ಗ್ರಾಮದ ಹಿರಿಯ ಮುಖಂಡರು ಹಾಗೂ ಡಿ.ಸಿ.ಸಿ ಬ್ಯಾಂಕ್ ನ ಜಿಲ್ಲಾ ಉಪಾಧ್ಯಕ್ಷರು ಆದ ಶ್ರೀಯುತ ಎಸ್.ಪಾಲಯ್ಯ ರವರನ್ನು ಕಳೆದುಕೊಂಡು ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಂತರ ಗ್ರಾಮದ ಮುಖಂಡರಾದ ಜಿ.ತಿಪ್ಪೇಸ್ವಾಮಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲ ಸಮುದಾಯದವರು ಪಾಲ್ಗೊಂಡು ರಥೋತ್ಸವವನ್ನು ಯಶಸ್ವಿಗೊಳಿಸಿದರು ಎಲ್ಲರಿಗೂ ಶರಣ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಿಯು ಗ್ರಾಮದ ಎಲ್ಲ ಸದ್ಭಕ್ತರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಶುಭ ಹಾರೈಸಿದರು..
ಈ ದಿನ ಗ್ರಾಮದ ಶ್ರೀ ಚೌಡೇಶ್ವರಿ ಯುವಕ ನಾಟ್ಯ ಕಲಾ ಸಂಘದ ವತಿಯಿಂದ ಇಂದು ರಾತ್ರಿ ” ಗರುಡನ ಕೈಗೆ ಸಿಕ್ಕಿ ಬರಡಾದ ಪಾರಿವಾಳ ಅರ್ಥಾತ್ ಪ್ರೇಮ ಲೋಕದಲ್ಲಿ ಪಾರಿಜಾತ ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನೀಡುತ್ತಿರುವುದು ಅತ್ಯಂತ ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ಯುವಕ ಸಂಘ, ಶ್ರೀ ವೇಮನ ರೆಡ್ಡಿ ಸಂಘ, ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ವಿವಿಧ ಮಹಿಳಾ ಸಂಘಟನೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು,ಯುವಕರು, ಮತ್ತು ಗ್ರಾಮದ ಮುಖಂಡರಾದ ಗ್ರಾಮದ ಬಾಲಯ್ಯ, ಒಬಣ್ಣ, ಬಸಯ್ಯ, ಪಾಲಯ್ಯ,ಗೋಪಣ್ಣ ರೈತರಾದ ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್, ಲಿಂಗಾರೆಡ್ಡಿ, ಭೀಮರೆಡ್ಡಿ, ರುದ್ರಣ್ಣ, ಬಸವ ರೆಡ್ಡಿ, ಓಬಯ್ಯ, ಟಿ. ರಾಜಣ್ಣ, ಪಿ.ಪ್ರಹಲ್ಲದ್, ಗ್ರಾಮ ಪಂಚಾಯಿತಿ ಸದಸ್ಯರು ಆದ ಎಸ್. ಟಿ. ರೇವಣ್ಣ, ಟಿ. ರಾಜಣ್ಣ, ದ್ರಾಕ್ಷಾಯಿಣಿ ನಾಗರಾಜ್, ಡಿ.ಓ ಲಕ್ಷ್ಮಿ , ಶ್ರೀಮತಿ ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಸಣ್ಣ ನಾಗಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಎಂ.ಏಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ, ಡಾ.ಮುನಿಸ್ವಾಮಿ ರೆಡ್ಡಿ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ರುದ್ರಮುನಿ, ಮಂಜುನಾಥ್,ಎಂ.ಟಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಭಿಮೇಶ್ ಶೆಟ್ಟಿ, ತಿಮ್ಮಶೆಟ್ಟಿ, ಶ್ರೀನಿವಾಸ್, ಮಂಜುನಾಥ್ ಸ್ವಾಮಿ.ಟಿ ಶಾಂತಣ್ಣ, ಗುರುಸ್ವಾಮಿ, ಮಾರಣ್ಣ, ಹನುಮಂತಪ್ಪ,
ಗಂಗಣ್ಣ,ದುರುಗಣ್ಣ,ಸಣ್ಣ ತಿಪ್ಪೇಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!