ನಾಯಕನಹಟ್ಟಿ ಚಿಕ್ಕಕೆರೆಯಲ್ಲಿ ಘನತ್ಯಾಜ್ಯ ವಸ್ತುಗಳ ಹಾವಳಿ ಜಾಸ್ತಿಯಾಗಿದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಹೋಬಳಿ ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಆರೋಪ.
ನಾಯಕನಹಟ್ಟಿ: ಮದ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರುತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತ ಚಿಕ್ಕಕೆರೆಯಲ್ಲಿ ಘನತ್ಯಾಜ್ಯ ವಸ್ತುಗಳ ಅವಳಿ ಜಾಸ್ತಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ಬೇಸರವನ್ನು ವ್ಯಕ್ತಪಡಿಸಿರು.
ಶನಿವಾರ ಪಟ್ಟಣದ ಚಿಕ್ಕ ಕೆರೆಯ ಆವರಣದಲ್ಲಿ ಬಾರ್, ಹೋಟೆಲ್ ಗಳಿಂದ ಸಂಗ್ರಹವಾದಂತ ಬಾಟಲ್, ಲೋಟ, ಘನತ್ಯಾಜ್ಯ ವಸ್ತುಗಳನ್ನ ವೀಕ್ಷಿಸಿ ಮಾತನಾಡಿದ ಅವರು ನಾಯಕನಹಟ್ಟಿ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂಥ ಪುಣ್ಯಕ್ಷೇತ್ರದಲ್ಲಿ ಘನತಾಜ್ಯ ವಸ್ತುಗಳ ಹಾವಳಿ ಜಾಸ್ತಿ ಆಗಿರುವುದರಿಂದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಬಾರ್ ಮಾಲೀಕರಿಗೆ ಮತ್ತು ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಆಗ್ರಹಿಸಿದರು.
ಸ್ಥಳೀಯ ಸುದ್ದಿ ವೀಕ್ಷಣೆಗೆ ನಮ್ಮ ಚಳ್ಳಕೆರೆ ಪೋರ್ಟಲ್ ಗೆ ಲಾಗಿನ್ ಆಗಿ