“ಭಗವಂತನ ನಿತ್ಯನಾಮಸ್ಮರಣೆಯಿಂದ ದೇವರ ದರ್ಶನ ಸಾಧ್ಯ”:- ಶ್ರೀಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ..

ಚಳ್ಳಕೆರೆ:-ಭಗವಂತನ ದಿವ್ಯವಾದ ನಿತ್ಯ ನಾಮ ಜಪದಿಂದ ನಾವು ಅವನ ದರ್ಶನವನ್ನು ಪಡೆಯಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು.

ನಗರದ ತ್ಯಾಗರಾಜನಗರದ ಶ್ರೀದತ್ತ ಮಂದಿರದಲ್ಲಿ ಶ್ರೀ ಬ್ರಹ್ಮ ಚೈತನ್ಯ ಗೋಂದಾವಲೇಕರ್ ಮಹಾರಾಜರ 111ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು
“ಶ್ರೀ ಮಾರುತಿ ಅಂಶರೂ ಶ್ರೀ ಸಮರ್ಥ ರಾಮದಾಸರ ಪುನರಾವತಾರಿಗಳೆಂದೂ ಪ್ರಸಿದ್ಧರಾದ ಗೋಂದಾವಲೆ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ “ದಹಿವಡಿ” ಬಳಿ ಮಾಣಗಂಗಾನದಿ ತಟದಲ್ಲಿರುವ “ಗೋಂದಾವಲೆ”ಎಂಬ ಗ್ರಾಮದಲ್ಲಿ ಮಾಘ ಶುದ್ಧ ದ್ವಾದಶಿ ಬುಧವಾರ (ತಾರೀಖು 19/02/1845 ) ಜನಿಸಿ ತಮ್ಮ ಜೀವಮಾನಕಾಲದಲ್ಲಿ ಇಡೀ ಭಾರತದೇಶವನ್ನು ೪-೫ ಬಾರಿ ಕಾಲುನಡಿಗೆಯಲ್ಲಿಯೇ ಸುತ್ತಿ ಅಖಂಡ ಭಾರತದಲ್ಲಿ “ರಾಮನಾಮ” ಪ್ರಸಾರಮಾಡಿದರು.

ಪ್ರಮಾದೀಚ ನಾಮ ಸಂವತ್ಸರದ ಮಾರ್ಗಶಿರ ಬಹುಳ ದಶಮಿ ಸೋಮವಾರ ೧೨-೧೨-೧೯೧೩ ರಂದು ಗೋಂದಾವಲಿಯಲ್ಲಿಯೇ ತಮ್ಮ ಅವತಾರ ಸಮಾಪ್ತಿಮಾಡಿದರು.
“ಭಗವಂತನ ನಾಮದ ಮಹಿಮೆಯನ್ನು ಹಾಡುತ್ತಾ, ಹಾಡುತ್ತಾ, ಅವರ ಆಯುಷ್ಯದ ಪ್ರತಿಯೊಂದು ಕ್ಷಣವೂ ಕಳೆಯಿತು. ನಾಮದ ಮಹತ್ವವನ್ನು ಹೇಳುವುದಕ್ಕಾಗಿಯೇ ಅವರು ಹುಟ್ಟಿ ಬಂದರು. ಜೀವನವೆಲ್ಲಾ ನಾಮದ ಗಾಯನವನ್ನೇ ಮಾಡಿದರು.

ತಮ್ಮ ಆಯುಷ್ಯದ ಕೊನೆಯ ಕ್ಷಣವನ್ನು, ನಾಮದ ಮಹತ್ವ ಹೇಳುವುದರಲ್ಲಿಯೇ ಕಳೆದರು.
ಶ್ರೀಮಹಾರಾಜರ ಆರಾಧನಾ ಮಹೋತ್ಸವದಂದು ನಾಮಸಾಧಕರು, ನಾಮಪ್ರೇಮಿಗಳು, ಸದ್ಗುರುಭಕ್ತರು, ಆಸ್ತಿಕರು, ಮುಮುಕ್ಷುಗಳು ಪ್ರತಿಯೊಬ್ಬರು ಹೆಚ್ಚು ಹೆಚ್ಚು ರಾಮನಾಮ ಸ್ಮರಣೆ ಮಾಡಿ ಶ್ರೀಸದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ತಿಳಿಸಿದರು.ಈ ಆರಾಧನಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಈ ಆರಾಧನಾ ಮಹೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಬ್ರಹ್ಮ ಚೈತನ್ಯ ಮಂದಿರದ ಅಧ್ಯಕ್ಷರಾದ ರವೀಂದ್ರನಾಥ್, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಅನಂತ ರಾಮ್ ಗೌತಮ್, ಡಾ.ಬಾಲಾಜೀ, ಬ್ರಹ್ಮ ಚೈತನ್ಯ ಮಂದಿರದ ಸದ್ಭಕ್ತರಾದ ಪ್ರಕಾಶ್,ಸುಮ, ಮಾಣಿಕ್ಯ , ಸುಮಂಗಳಮ್ಮ, ವಿಜಯಲಕ್ಷ್ಮೀ, ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಲಕ್ಷ್ಮೀದೇವಮ್ಮ, ಗೌರಾಂಬಿಕ, ಯತೀಶ್ ಎಂ ಸಿದ್ದಾಪುರ, ಗೀತಾ ನಾಗರಾಜ್, ಗೀತಾ ವೆಂಕಟೇಶ್ ರೆಡ್ಡಿ, ಗಂಗಾಂಬಿಕೆ,ಜಯಮ್ಮ ಸುಜಾತ,ಡಾ.ಭೂಮಿಕ , ನಾಗರತ್ನಮ್ಮ, ರಶ್ಮಿ ರಮೇಶ್ ವೀರಮ್ಮ,ಸೇರಿದಂತೆ ಮಹಾರಾಜರ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!