ಚಳ್ಳಕೆರೆ: ಬಾರ್ ಬೀಗ ಒಡೆದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಬಾರ್ ಮುಂಭಾಗದ ಗೇಟ್ ತೆಗೆದು ಒಳ ಪ್ರವೇಶ ಮಾಡಿದ ಮೂವರು ಕದೀಮರು, ಓರ್ವ ಮುಖಕ್ಕೆ ಮಾಸ್ಕ್ , ತಲೆಗೆ ಟೋಪಿ ಹಾಕಿಕೊಂಡಿದ್ದಾನೆ.
ಬಾರ್ ನ ಒಂದು ಭಾಗದ ಬೀಗ ಒಡೆದು ಮತ್ತೊಂದು ಭಾಗದ ಬೀಗ ಒಡೆಯಲು ವಿಫಲರಾಗಿದ್ದಾರೆ. ಬಾರ್ ಕಳ್ಳತನ ಮಾಡಲು ಮೂವರು ಯತ್ನಿಸಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಗ್ರಾಮೀಣ ಪ್ರದೇಶಗಳಿಗೆ ಬೀಟ್ ಸುತ್ತಲು ನೇಮಿಸಿದ ಪೊಲೀಸರು ಗ್ರಾಮೀಣ ಪ್ರದೇಶಗಳ ಕಡೆ ಸುತ್ತಾಡದಿರುವುದರಿಂದ ಹಳ್ಳಿಗಳಲ್ಲಿ ಕಳ್ಳರ ಹಾವಳಿ ಮುಂದುವರೆಯುತ್ತಿದೆ ಎನ್ನುತ್ತಾರೆ ಸಾರ್ವಜನಿಕರು….