ಒಳಮೀಸಲಾತಿ ಜಾರಿಗಾಗಿ ಇಪ್ಪತ್ತು ಕಿಲೋಮೀಟರ್ ಪಾದಯಾತ್ರೆ

ಉರಿಬಿಸಿಲು ಲೆಕ್ಕಿಸದೆ ಕಿಕ್ಕಿರಿದ ಜನರು

ತಳಕು-ನಾಯಕನಹಟ್ಟಿ ಭಾಗದ ಮಾದಿಗ ಸಮುದಾಯದ ಮುಖಂಡರ ಒಕ್ಕೂರಲು

ಮಹಿಳೆಯರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚಿನ ಜನರು ಬಾಗಿ

ದಾರಿಯುದ್ದಕ್ಕೂ ತಮಟೆ ವಾದ್ಯ, ವಿವಿಧ ಘೋಷಣೆಗಳ ಕೂಗು

ರಸ್ತೆಯುದ್ದಕ್ಕೂ ನೀಲಿ ಬಣ್ಣದ ವಸ್ತ್ರಗಳ ಕಾರುಬಾರು

ಚಳ್ಳಕೆರೆ :

ಒಳಮೀಸಲಾತಿ ಶೀಘ್ರವಾಗಿ ಜಾರಿಯಾಗಲು ಸುಮಾರು ಹದಿನೈದು ಕಿಲೋಮೀಟರ್ ದೂರದ
ತಳಕು ನಾಯಕನಹಟ್ಟಿ ಹೋಬಳಿಗಳ ಮಾದಿಗ ಸಮುದಾಯದ ಮುಖಂಡರು ಕಾಲ್ನಡಿಗೆಯ ಮೂಲಕ ಉರಿ ಬಿಸಿಲು ಲೆಕ್ಕಿಸಿದೆ ಮುಂದಿನ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ತಳಕು
ಗರಣಿ ಕ್ರಾಸ್‌ನಿಂದ ಚಳ್ಳಕೆರೆ ತಾಲ್ಲೂಕು ಕಛೇರಿವರೆಗೆ ಕಾಲ್ನಡಿಗೆ ಜಾತ ನೆಡಿಸಿ ಒಳಮೀಸಲಾತಿ
ಶೀಘ್ರವಾಗಿ ಜಾರಿಗೆ ತರಲು ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಜ್ಯ ಪಾಲರು
ರಾಜಭವನ, ಕರ್ನಾಟಕ ಸರ್ಕಾರ, ಬೆಂಗಳೂರು. ಹಾಗೂ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ, ವಿಧಾನಸೌದ, ಬೆಂಗಳೂರು. ಇವರಿಗೆ
ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು ‌

ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ನಿವೃತ್ತ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಮಾತನಾಡಿ,
ಕಳೆದ ಮೂರುವರೆ ದಶಕಗಳಿಂದ ದಕ್ಷಿಣ ಭಾರತದ ಮಾದಿಗರು ಮತ್ತು ಮಾದಿಗ ಸಂಬಂಧಿತ ಜಾತಿಗಳು
ಒಳಮೀಸಲಾತಿಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಲೇ ಬಂದಿವೆ. 1996 ರ ನ್ಯಾಯಮಾರ್ತಿ
ರಾಮಚಂದ್ರರಾಜು ಆಯೋಗ (ಆಂಧ್ರ ಪ್ರದೇಶ) 2008 ರ ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ (ಕೇಂದ್ರ ಸರ್ಕಾರ)
ಹಾಗೂ 2012 ರ ನ್ಯಾಯಮಾರ್ತಿ ಎ.ಜೆ. ಸದಾಶಿವ ಆಯೋಗ (ಕರ್ನಾಟಕ) ಈ ಎಲ್ಲಾ ಆಯೋಗಗಳು ಒಳ ಮೀಸಲಾತಿಯು
ನ್ಯಾಯ ಸಮ್ಮತ ಸಮಾನತೆ ತತ್ವದಡಿ ಇದೆ ಒಕ್ಕೊರಲಿನ ಅಭಿಪ್ರಾಯ ಪಟ್ಟಿವೆ ಆದರೆ ಆಳುವ ಸರಕಾರಗಳು ನಮ್ಮನ್ನು ಕಡೆಗಣಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಚನ್ನಗಾನಹಳ್ಳಿ ಮಲ್ಕೇಶ್ ಮಾತನಾಡಿ,
2008 ರಲ್ಲಿ ನ್ಯಾಯಮೂರ್ತಿ ಉಷಾ ಮೆಹ್ರಾ
ವರದಿಯ ಶಿಫಾರಸ್ಸಿನಂತೆ ಒಳ ಮೀಸಲಾತಿಗಾಗಿ ಸಂವಿಧಾನ ವಿಧಿ 341 ಕ್ಕೆ ತಿದ್ದುಪಡಿಯಾಗಿದ್ದಲ್ಲಿ ದಕ್ಷಿಣ ಭಾರತದ ಮಾದಿಗರು
ಮತ್ತು ಸಂಬಂಧಿತ ಜಾತಿಗಳು ಇಲ್ಲಿಗೆ 17 ವರ್ಷಕ್ಕೂ ಮೊದಲೇ ಒಳ ಮೀಸಲಾತಿಯ ಅನುಕೂಲತೆಯನ್ನು
ಪಡೆದುಕೊಳ್ಳುತ್ತಿದ್ದವು. ಆದರೆ ಕೇಂದ್ರವನ್ನು ಆಳಿದ ಮೊದಲ ಆರು ವರ್ಷ ಕಾಂಗ್ರೆಸ್ ಪಕ್ಷ ಮತ್ತು ಈಗಿನ 11 ವರ್ಷ ಬಿಜೆಪಿ
ಪಕ್ಷಗಳು ನ್ಯಾ. ಉಷಾ ಮೆಹ್ರಾ ಆಯೋಗದ ವರದಿಯನ್ನು ಮೂಲೆಗೆ ಬಿಸಾಕಿದವು ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ್ ಮಾತನಾಡಿ,
ನಮ್ಮಂತೆ ಯಾವುದೇ ಹೋರಾಟ,
ಪ್ರತಿಭಟನೆ ಜಾತಾ ಮುಂತಾದವುಗಳನ್ನು ಮಾಡದ ಮೂರು ಪರ್ಸೆಂಟ್ ಜನಕ್ಕೆ ಸದ್ದು ಗದ್ದಲವಿಲ್ಲದೆ ಸಂವಿಧಾನಕ್ಕೆ ತಿದ್ದುಪಡಿ
ತಂದು 10% ನೀಡಿದ ಸರ್ಕಾರ ನಮ್ಮ 30 ವರ್ಷಗಳ ಹೋರಾಟಕ್ಕೆ ಕಿವುಡಾಗಿದ್ದಂತು ಸತ್ಯ. ದುರಂತವೆಂದರೆ ಈ ಅವಧಿಯಲ್ಲಿ
ಕೇಂದ್ರ ಮತ್ತು ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಮಾದಿಗ ಸಂಬಂಧಿತ ಜಾತಿಗಳವರೇ ಆಗಿದ್ದರು. ಈ 30
ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳು ಸರತಿಯಂತೆ ಮಾದಿಗರನ್ನು
ವಂಚಿಸುತ್ತಲೇ ಬಂದವು ಎಂದರು.

ನಲಗೇತನಹಟ್ಟಿ ನಾಗರಾಜ್ ಮಾತನಾಡಿ,
ದಿನಾಂಕ 1-8-2024ರ ಸರ್ವೋಚ್ಚ ನ್ಯಾಯಾಲಯದ ಏಳು ಜನರ ನ್ಯಾಯಮೂರ್ತಿಗಳ
ಸಂವಿಧಾನ ಪೀಠವು ಒಳ ಮೀಸಲಾತಿ ಸಮಾನತೆ ನ್ಯಾಯತತ್ವದ ಅಡಿ ಇದೆ. ಒಳಮೀಸಲಾತಿಯು ಇರುವ ಮೀಸಲಾತಿಯನ್ನೇ
ಪರಿಶಿಷ್ಟರೊಳಗೆ ಹಂಚಿಕೆ ಮಾಡುವುದರಿಂದ ಇಲ್ಲಿ ಸಂವಿಧಾನ ವಿಧಿ 341 ರಡಿ ಈಗಿರುವ ಜಾತಿಗಳನ್ನು ಪಟ್ಟಿಯಿಂದ
ತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಇಲ್ಲವಾದ್ದರಿಂದ ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕತೆ ಇಲ್ಲವೆಂದು ಮತ್ತು
ಪರಿಶಿಷ್ಟ ಜಾತಿಗಳ ಪಟ್ಟಿ ವಿಭಿನ್ನವಾದ ಗುಂಪುಗಳಾಗಿರುವುದರಿಂದ ಒಳಮೀಸಲಾತಿ ಮಾಡುವ ಅಧಿಕಾರ ರಾಜ್ಯಗಳಿಗೆ ಇದೆ
ಎಂಬುದನ್ನು ಒತ್ತಿ ಹೇಳಿದೆ ಎಂದರು.

ಇನ್ನೂ ಗಾಂಧಿನಗರದ ಎಂ.ಶಿವಮೂರ್ತಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದು 88 ದಿನಗಳು ಕಳೆದರೂ ರಾಜ್ಯದಲ್ಲಿ ಸಿದ್ದರಾಮಯ್ಯ
ನೇತೃತ್ವದ ಕಾಂಗ್ರೆಸ್‌ ಪಕ್ಷ ಎಚ್ಚರಗೊಳ್ಳಲು ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೇ ಬರಬೇಕಾಯಿತು.

ಅಕ್ಟೋಬರ್ 28 ರಂದು ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ತಾತ್ವಿಕವಾಗಿ ಒಪ್ಪಿರುವುದಾಗಿ ಇದಕ್ಕಾಗಿ
ಆಯೋಗವನ್ನು ನೇಮಕ ಮಾಡುವುದಾಗಿ ಮತ್ತು ಆಯೋಗದ ವರದಿ ಬಂದು ತೀರ್ಮಾನ ಕೈಗೊಳ್ಳುವವರಿಗೆ
ಯಾವುದೇ ಹೊಸ ನೇಮಕಾತಿಗಳನ್ನು ಮಾಡಲು ಅಧಿಸೂಚನೆಗಳನ್ನು ಹೊರಡಿಸುವು ದಿಲ್ಲವೆಂದು ಕೈಗೊಂಡ
ನಿರ್ಣಯವನ್ನು ಸರ್ಕಾರ ತಾನೇ ಮುರಿದು ಈತನಕ ನಿರಂತರವಾಗಿ ಹೊಸ ನೇಮಕಾತಿಗಾಗಿ ಅಧಿಸೂಚನೆಗಳನ್ನು
ಹೊರಡಿಸುತ್ತಲೇ ಇದೆ. ಇದಲ್ಲದೆ ಜನವರಿಯಿಂದ ಈವರೆಗೂ ಸುಮಾರು 32 ಸಾವಿರಕ್ಕೂ ಹೆಚ್ಚು ಹುದ್ದೆಗಳ
ನೇಮಕಾತಿಗಳಿಗೆ ಅರ್ಜಿಸಲ್ಲಿಸಲು ಈಗ ಕಾಲಾವಕಾಶ ವಿಸ್ತರಿಸಿದ್ದಾರೆಂದರೆ ಬಹುಶಃ ಇದಕ್ಕಿಂತಲೂ ಮಿಗಿಲಾದ
ಸ೦ವಿಧಾನ ವಿರೋಧಿ ಕೆಲಸ ಬೇರೇನು ಇಲ್ಲ ಎಂದು ಒತ್ತಾಯಿಸಿದರು.

ಹಕ್ಕೊತ್ತಾಯಗಳು:

1) ಒಳಮೀಸಲಾತಿ ಜಾರಿಯಾಗುವ ತನಕ ಹೊಸ ನೇಮಕಾತಿಗಳು ಮತ್ತು ಮುಂಬಡ್ತಿಗಳು ತಡೆಯಾಗಬೇಕು.
2) ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವ ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು.
3) ಒಳ ಮೀಸಲಾತಿ ವಿರೋಧಿ ಸಭೆಗಳಲ್ಲಿ ಭಾಗವಹಿಸುವ ಸಚಿವರುಗಳ ಶಾಸಕರ ಅಧಿಕಾರಿಗಳ/ನೌಕರರ ವಿರುದ್ಧ ಕ್ರಮಕೈಗೊಳ್ಳಬೇಕು.
4) ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಕಾರ್ಯ ನಿರ್ವಹಿಸಲು ಅಗತ್ಯವಾದ ಪರಿಕರಗಳನ್ನು ಸವಲತ್ತುಗಳನ್ನು
ಸರ್ಕಾರವು ತಡವಾಗಿ ನೀಡಿರುವ ರೀತಿಯಲ್ಲಿ ತಡಮಾಡದೆ ಅವರ ವರದಿಯನ್ನು ಸಲ್ಲಿಸಿದ ತಕ್ಷಣವೇ ಸಮ್ಮತಿಸಿ ಒಪ್ಪಿಕೊಳ್ಳಬೇಕು.
5) ಒಳಮೀಸಲಾತಿ ಜಾರಿಗೆಯಾಗುವ ತನಕ ಸರ್ಕಾರವು SCP ಹಣವನ್ನು ಬಿಡುಗಡೆಗೊಳಿಸುವುದನ್ನು ತಡೆಯಬೇಕು.
6) ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಅನೇಕ ಆಯೋಗಗಳ ವರದಿಗಳಲ್ಲಿ ಒಳಮೀಸಲಾತಿಗೆ ಅಗತ್ಯವಾದ ಎಂಪಿರಿಕಲ್
ಡೇಟಾವು ದೊರೆಯುತ್ತದೆ. ಆ ಡೇಟಾಗಳನ್ನು ಈಗಿನ ಒಳಮೀಸಲಾತಿ ಸಮಿತಿಗೆ ಒದಗಿಸಬೇಕು.

ಇದೇ ಸಂಧರ್ಭದಲ್ಲಿ ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ದಲಿತ ಸಂಘರ್ಷ ಸಮಿತಿ ಟಿ.ವಿಜಯ್ ಕುಮಾರ್, ಕುದಾಪುರ ತಿಪ್ಪೇಸ್ವಾಮಿ, ನಾಗರಾಜ್, ಭೀಮನಕೆರೆ ನಿಂಗರಾಜ್, ರೇವಣ್ಣ , ವೀರಣ್ಣ , ಶಂಕರ್ ಸ್ವಾಮಿ, ಹಿರೆಹಳ್ಳಿ ಮಲ್ಲೇಶ್, ಮರಿಪಾಲಯ್ಯ, ಬಸವರಾಜ್, ವೆಂಕಟೇಶ್, ರುದ್ರಮುನಿ, ದುರ್ಗೇಶ್ ಚಂದ್ರಣ್ಣ , ಹೊನ್ನೂರು ಮಾರಣ್ಣ , ಚನ್ನಗಾನಹಳ್ಳಿ‌ ಮಲ್ಲೆಶ್ ,ಭಿಮನಕೆರೆ ಶಿವಮೂರ್ತಿ, ನಾಗರಾಜ್ , ಮರಿಪಾಲಯ್ಯ, ಮೋಹನ್, ಹೊನ್ನುರು ಮಾರಣ್ಣ, ದುರ್ಗೇಶ್, ಭಿಮಣ್ಣ, ಗಾಂಧಿನಗರದ ಎಂ.ಶಿವಮೂರ್ತಿ,
ಎಸ್ ರಾಜಣ್ಣ, ರುದ್ರಮುನಿಯಪ್ಪ , ಹಾಗೂ ಇತರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!