ಚಳ್ಳಕೆರೆ :
ಯಾರ ಒತ್ತಡಕ್ಕೂ ಮಣಿಯದೆ ಕೆಲಸ
ಮುಂದುವರೆಸಿ
ಹಿರಿಯೂರಿನ ಮುಖ್ಯ ರಸ್ತೆಯ ಅಗಲೀಕರಣಕ್ಕೆ, ಕರವೇ ಕಳೆದ
18 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ.
ಇದೀಗ
ಅದಕ್ಕೆ ಪ್ರತಿಫಲದಂತೆ ಅಗಲೀಕರಣಕ್ಕೆ ನಗರಸಭೆ ಮುಂದಾಗಿದ್ದು,
ಮುಂದಿನ ದಿನಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ
ಮುಂದುವರೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.
ಸುಧಾಕರ್ ಗೆ ಕರವೇ ಕಾರ್ಯಕರ್ತರು ಗುರುವಾರ ಮನವಿಯನ್ನು
ನೀಡಿದರು.
ಈಗಾಗಲೇ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ
ಕೆಲ ಕಟ್ಟಡಗಳನ್ನು ತೆರವುಗೊಳಿಸಿದ್ದು, ಅದನ್ನು ನಿಲ್ಲಿಸದೆ
ಮುಂದುವರೆಸಬೇಕೆಂದು ಆಗ್ರಹಿಸಿದರು.