ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಚಿತ್ರದುರ್ಗದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ (CTE) ಭೇಟಿ ನೀಡಿದರು.
ಸಂದರ್ಭದಲ್ಲಿ ಈ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಮಂಜುನಾಥ ಮತ್ತು ಪ್ರಭಾಕರ್ ಅವರು ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಹೇಮಂತ್ ರಾಜ್ ಎನ್ ಎಲ್, ಉಪನ್ಯಾಸಕ ಕೆ.ಬಿ.ರವಿಕುಮಾರ್, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಯತೀಶ್ ಎಂ ಸಿದ್ದಾಪುರ, ಆಕಾಶ್,ಇಂದುಮತಿ,ಚಂದನ, ಭೂಮಿಕ ಆರ್,ಪ್ರಶ್ಮಿತ, ಸಾವಿತ್ರಮ್ಮ,ಕವಿತ,ಬೋರಮ್ಮ,ಪದ್ಮ, ಮರಿಸ್ವಾಮಿ, ಭೂಮಿಕ.ಬಿ, ಗಿರೀಶ್ ತಿಪ್ಪೇಸ್ವಾಮಿ,ಅರುಣ, ಅಂಜುಮ್, ರಮ್ಯ,ರವಿಕಿರಣ್, ಭೂಮಿಕ ಜೆ, ಅಂಜು, ಮುಂತಾದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.