ಚಳ್ಳಕೆರೆ :
ಧರ್ಮಪುರ ಭಾಗದ ಕೆರೆಗಳು ಭರ್ತಿ
ಹಿರಿಯೂರಿನ ಧರ್ಮಪುರದ ಸುತ್ತಮುತ್ತ ಮೂರ್ನಾಲ್ಕು
ದಿನಗಳಿಂದ ಉತ್ತಮ ಮಳೆಯಾಗಿದ್ದು, ಅರಳಿಕೆರೆ, ಮದ್ದಿಹಳ್ಳಿ,
ಹೊಸಕೆರೆ, ಬಿಕೆ ಹಟ್ಟಿ, ಪಿಡಿ ಕೋಟೆ ಹಾಗು ಹಲಗಲದ್ದಿ ಭಾಗದ ಹಳ್ಳ
ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ.
ಮದ್ದಿಹಳ್ಳಿ ಅರಳಿಕೆರೆ
ಹಲಗಲದ್ದಿ ಖಂಡೆನಹಳ್ಳಿ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ.
ಇದೀಗ
ತುಂಬಿರುವ ಕೆರೆಗಳು ಇನ್ನೊಂದು ಮಳೆಯಾದರೆ ಕೋಡಿ ಬೀಳಲಿವೆ
ಇದರಿಂದ ರೈತರಲ್ಲಿ ಸಂತಸ ಮೂಡಿದೆ.