ಚಳ್ಳಕೆರೆ :
ಕೋವಿಡ್ ಸಮಯದ ಹಣಕಾಸಿನ ಲೆಕ್ಕ
ಕೊಡಿ
ಮುಂದಿನ ಕೆಡಿಪಿ ಸಭೆಯಲ್ಲಿ ಕೋವಿಡ್ ವೇಳೆ ಚಿತ್ರದುರ್ಗ
ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಸರ್ಕಾರದಿಂದ ಎಷ್ಟು ಅನುದಾನ
ಬಂದಿತ್ತು, ಎಷ್ಟು ಖರ್ಚಾಗಿದೆ ಎಂದು ಹೊಳಲ್ಕೆರೆ ಶಾಸಕ ಎಂ.
ಚಂದ್ರಪ್ಪ ವೈದ್ಯಾಧಿಕಾರಿಗೆ ಸೂಚಿಸಿದರು.
ಚಿತ್ರದುರ್ಗದ ಜಿಪಂ
ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತಾಡಿ,
ಕೋವಿಡ್ ಸಮಯದಲ್ಲಿ ಖರೀದಿಸಿದ ವಸ್ತುಗಳು ಎಲ್ಲಿವೆ,
ಸಿಎಸ್ಆರ್ ನಿಧಿ ಎಷ್ಟು ಬಂದಿತ್ತು. ಎಲ್ಲ ವಿವರಗಳನ್ನು ಸಲ್ಲಿಸಲು
ಸೂಚಿಸಿದರು.