“ಅಗ್ನಿ ಅವಘಡಗಳನ್ನು ತುರ್ತಾಗಿ ಎದುರಿಸುವುದು” ಅಗತ್ಯ:-ಅಗ್ನಿಶಾಮಕ ಸಿಬ್ಬಂದಿ ಪ್ರವೀಣ್ ಅಭಿಮತ.

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಪೌರತ್ವ ತರಬೇತಿ ಶಿಬಿರದ ಪ್ರಯುಕ್ತ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ಅಗ್ನಿ ಅವಘಡಗಳ ಪ್ರಾತ್ಯಾಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಪ್ರವೀಣ್ ಅವರು “ಯಾವುದೇ ರೀತಿಯ ಅಗ್ನಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಅವುಗಳನ್ನು ಪ್ರಾಥಮಿಕ ಹಂತದಲ್ಲಿಯೇ ಎದುರಿಸುವ ಜ್ಞಾನವನ್ನು ಪ್ರತಿಯೊಬ್ಬರು ಹೊಂದುವುದರಿಂದ ಮಾತ್ರ ಅದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಲು ಸಾಧ್ಯ ಎಂದು ಅಗ್ನಿ ಅವಘಡಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ನಿಜಗುಣ ಅವರು ಅಗ್ನಿ ಅವಘಡಗಳ ಬಗ್ಗೆ ಕಿರು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲಿ ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ರೀತಿಯ ಅಗ್ನಿ ಅವಘಡಗಳ ಪ್ರಾತ್ಯಾಕ್ಷಿಕೆಯ ಅಣುಕು ಪ್ರದರ್ಶನ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಜಬೀವುಲ್ಲಾ, ವಿಶ್ವನಾಥ್,ಖಂಡೊಜಿ,ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಿ.ಆರ್ ಪ್ರಮೀಳಾ, ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಹೇಮಂತ್ ರಾಜ್ ಎನ್ ಎಲ್, ಹಿರಿಯ ಉಪನ್ಯಾಸಕರಾದ ರಾಘವೇಂದ್ರ ನಾಯಕ್, ಕೆ.ಬಿ.ರವಿಕುಮಾರ್, ದೊರೆಸ್ವಾಮಿ ವಿಶ್ವನಾಥ್ ,ಕಲ್ಲೇಶ್, ನಾಗೇಶ್, ಶಾಮಸುಂದರ್, ಕಚೇರಿ ಅಧೀಕ್ಷಕರಾದ ವಾಣಿಶ್ರೀ, ಪ್ರಶಿಕ್ಷಣಾರ್ಥಿಗಳಾದ ಯತೀಶ್ ಎಂ ಸಿದ್ದಾಪುರ, ಆಕಾಶ್, ಸಿರೀಶ್, ಬಾಬು,ಶರತ್, ಬಾಲಾಜೀ, ಪೃಥ್ವಿ ,ಮೋಹನ್, ಲಕ್ಷ್ಮಣ, ಮಾರನಾಯಕ,ರಕ್ಷಿತ,ವಿದ್ಯಾಶ್ರೀ, ಭಾಗೀರಥಿ,ಹಂಸ, ಕಾವ್ಯ ಮುಂತಾದ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

Namma Challakere Local News
error: Content is protected !!