ಚಳ್ಳಕೆರೆ :
ಗ್ರಾಮೀಣ ಪ್ರದೇಶದಲ್ಲಿ ಉನ್ನತ ವ್ಯಾಸಂಗ ಗಗನ ಕುಸುಮ ಎಂಬ ದಿನಮಾನಗಳಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಒತ್ತಾಸೆಯಂತೆ ಬಯಲು ಸೀಮೆಯಲ್ಲಿ ಸರಕಾರಿ ಇಂಜಿನಿಯಾರ್ ಕಾಲೇಜು ತೆರೆದು ಶಿಕ್ಷಣ ನೀಡುವುದು ಈ ಭಾಗದ ಬಡ ಮಕ್ಕಳಿಗೆ ವರದಾನವಾಗಿದೆ ಎಂದು ಶ್ರೀ ಮತಿ ಅಂಗಡಿ ಮಲ್ಲಮ್ಮ ಶ್ರೀ ಯರಮಲ್ಲಯ್ಯ ಸ್ಮರಣಾರ್ಥ ಮೂಗಬಸಪ್ಪ ದೇವರ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ
ಪರವತಯ್ಯ ಹೇಳಿದರು.
ಅವರು ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಪ್ರವೇಶ ದಾಖಾಲಾತಿ ಸಂಧರ್ಭದಲ್ಲಿ ಕಲ್ಕತ್ತಾದಿಂದ ಬೀಜ ಇಲ್ಲದೆ ಇರುವ ಹಲಸಿನ ತಳಿಯ ಸಸಿಯನ್ನು ತಂದು ನೆಟ್ಟು ಮಾತನಾಡಿದರು,
ಸರ್ಕಾರಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲರಾದ ಮಹಾಗುಂಡಪ್ಪ , ಆಟೋಮೊಬೈಲ್ ಎಚ್ ಓ ಡಿ ಲಕ್ಷ್ಮಿದೇವಮ್ಮ, ಉಪನ್ಯಾಸಕ ನಾಗಾರ್ಜುನ , ಚಾರಿಟೇಬಲ್ ಟ್ರಸ್ಟ್ ನ ಶಾಲಿನಿ, ನವೀನ, ಅಮೃತಶೀಖ, ಇತರರು ಪಾಲ್ಗೊಂಡಿದ್ದರು.
ಶ್ರೀ ಅಂಗಡಿ ಮಲ್ಲಮ್ಮ ಶ್ರೀ ಯರಮಲ್ಲಯ್ಯ ಸ್ಮರಣಾರ್ಥ ಮೂಗಬಸಪ್ಪ ದೇವರ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಸಸಿಯನ್ನು ಕೊಡುಗೆಯಾಗಿ ನೀಡುವುದರ ಮೂಲಕ ಮಾತನಾಡಿದ ಅವರು ಟ್ರಸ್ಟ್ ನ ಅಧ್ಯಕ್ಷರಾದ ಮಲ್ಲಯ್ಯ ಉಪಾಧ್ಯಕ್ಷರಾದ ಮಲ್ಲೇಶಿ ಕಾರ್ಯದರ್ಶಿಯಾದ ಪಾರ್ವತಯ್ಯ ಇತರರು ಹಾಜರಿದ್ದರು