ಚಳ್ಳಕೆರೆ :
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ದಿನ ನಿತ್ಯದ ಆದಾಯ ಬರುವಂತಹ ಹಾಲು ಉತ್ಪಾದನೆ ವ್ಯವಸ್ಥೆ ಇದ್ದಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಶಿಮುಲ್ ಸಹಕಾರ ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಹೇಳಿದರು.
ಅವರು ತಾಲೂಕಿನ ಘಟಪರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಮ್ಮನಹಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಆಶ್ರಿತ ಸಂಸ್ಥೆಯ
ಹಾಲು ಉತ್ಪಾದಕರ ಸಹಕಾರ ಮಹಿಳಾ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು,
ಪ್ರತಿಯೊಂದು ಮನೆಯು ಆರ್ಥಿಕತೆ ಹೊಂದಲು ಆ ಮನೆಯ ತಲಾ ಆದಾಯ ಮುಖ್ಯವಾಗುತ್ತದೆ, ಅದರಂತೆ ಮಹಿಳೆಯರು ಕೂಡ ಸಬಲರಾಗಲು ಇಂತಹ ಹಾಲು ಉತ್ಪಾದನೆಯಂತ ವೃತ್ತಿ ಅವಲಂಭಿಸಿದಾಗ ಮಾತ್ರ ಶ್ರೇಯಸ್ಸು ಕಾಣಬಹುದು, ಆದ್ದರಿಂದ ಪ್ರತಿಯೊಂದು ಮನೆಯಲ್ಲಿ ಇಂತಹ ಹಾಲುನೀಡುವ ಹಸುಗಳಿದ್ದರೆ ನಿಮ್ಮ ಜೀವನ ಸುಖಕರವಾಗಿರುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಟಿ.ಗೋಪಾಲಾ,
ನಯಾಜ್, ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ಸುನಿತಾ, ರತ್ನಮ್ಮ, ಹಾಲು ಪರೀವೀಕ್ಷಣಗಾರ ಬಸವರಾಜ್, ವೀಣಾ, ಗ್ರಾಮಸ್ಥರು ಇತರರು ಇದ್ದರು.