ಚಳ್ಳಕೆರೆ :
ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ಡಿ.
ಸುಧಾಕರ್
ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ, ಅವರ
ಅಧಿಕಾರಾವಧಿಯಲ್ಲಿ ಆಗಿದ್ದನ್ನು ಮರೆತಿದ್ದಾರೆಂದು ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಅವರ ಅಧಿಕಾರವಧಿಯಲ್ಲಿಎಷ್ಟು ಕಡೆ ಲಂಚ ನಡೆದಿತ್ತೆಂದು
ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಪತಿಗೆ ಚ್ಯುತಿ
ಬರಬಾರದೆಂದು ನಿವೇಶನಗಳನ್ನು ಪಾರ್ವತಿ ಹಿಂತಿರುಗಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂಗೆ ಏನೂ ಆಗಲ್ಲ ಎಂದು ಸುಧಾಕರ್
ಭವಿಷ್ಯ ನುಡಿದಿದ್ದಾರೆ.