ಪ್ರತಿಯೊಬ್ಬ ಕಾರ್ಮಿಕರು ಇಲಾಖೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಚಳ್ಳಕೆರೆ
ಕಾರ್ಮಿಕ ನಿರೀಕ್ಷಕರು ಕುಸುಮಾ ಸಲಹೆ.
ನಾಯಕನಹಟ್ಟಿ::ಅ.4. ಕಾರ್ಮಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಕಾರ್ಮಿಕರು ಸೌಲಭ್ಯವನ್ನು ಪಡೆದುಕೊಳ್ಳಿ ಎಂದು ಚಳ್ಳಕೆರೆ ಕಾರ್ಮಿಕ ನಿರೀಕ್ಷಕರು ಕುಸುಮಾ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ಯಾತ್ರಿ ನಿವಾಸದಲ್ಲಿ
ಕರ್ನಾಟಕ ಕಾರ್ಮಿಕ ಇಲಾಖೆ ಕಟ್ಟಡ ನಿರ್ಮಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಪೂರ್ವ ಕಲಿಕೆ ಮಾನ್ಯತೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡಿ ತರಬೇತಿಯಲ್ಲಿ ಸರ್ಟಿಫಿಕೇಟ್ ₹ 630 ರೂ. ಖಾತೆಗೆ ಜಮವಾಗುತ್ತದೆ ಮತ್ತು ಸೇಫ್ಟಿ ಕಿಟ್ ಕೂಡ ತರಬೇತಿಯಲ್ಲಿ ನೀಡಲಾಗುತ್ತದೆ ಆದ್ದರಿಂದ ಹೋಬಳಿಯ ಎಲ್ಲಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇಲಾಖೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಸಲಹೆ ನೀಡಿದರು.
ಇನ್ನೂ ನಾಯಕನಹಟ್ಟಿ ಹೋಬಳಿಯ ಕಟ್ಟಡ ಕಾರ್ಮಿಕರ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಮಾತನಾಡಿದ ಅವರು ಕಾರ್ಮಿಕರು ಪೂರ್ವ ಕಲಿಕಾ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ ಪ್ರತಿಯೊಬ್ಬ ಕಾರ್ಮಿಕರು ಇಂತಹ ಉತ್ಸವವನ್ನು ನೀಡಿದರೆ ನಾವು ಬೆಂಬಲವನ್ನು ನೀಡಲು ಸದಾ ಸಿದ್ಧವಿರುತ್ತೇವೆ ಸರ್ಕಾರ ಕಾರ್ಮಿಕರಿಗೆ ಕಳೆದ ಒಂದು ವರ್ಷದಿಂದ ಸ್ಕಾಲರ್ಶಿಪ್ ನೀಡದಿರುವುದು ಮತ್ತು ಶಾದಿ ಭಾಗ್ಯ ಹಣವನ್ನು ಸಹ ಬಿಡುಗಡೆ ಮಾಡಿಲ್ಲ ತಾಲೂಕು ಕಾರ್ಮಿಕ ನಿರೀಕ್ಷಕರು ಕುಸುಮಾ ರವರು ಕೂಡಲೇ ಸರ್ಕಾರಕ್ಕೆ ಮನವಿಯನ್ನ ಮಾಡುವಂತೆ ಒತ್ತಾಯಿಸಿದರು ಇನ್ನೂ ತರಬೇತಿಯಲ್ಲಿ ಪಾಲ್ಗೊಂಡ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಅಭಿನಂದನೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರೈನಿಂಗ್ ಮೆನೇಜರ್ ಸತ್ಯೇಂದ್ರ ಗಿರಿ, ಕೋ ಆರ್ಡಿನೇಟರ್ ಮಂಜುನಾಥ್ ಸಿವಿಲ್ ಟ್ರೈನರ್ ನಾಗರಾಜ್ ರಂಜಿನಿ ಕುಮಾರಿ ನಾಯಕನಹಟ್ಟಿ ಹೋಬಳಿಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎನ್ ಸಿ ತಿಪ್ಪೇಸ್ವಾಮಿ. ಕಾರ್ಯದರ್ಶಿ ಬೋಸಯ್ಯ, ಸದಸ್ಯರಾದ ದಾದಾಪೀರ್ ಶರೀಫ್ ಸೇರಿದಂತೆ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು