ಚಳ್ಳಕೆರೆ :

ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ವತಿಯಿಂದ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಸಿಐಯುಟಿಸಿ ಪೇಡೆರೆಷನ್ ವತಿಯಿಂದ ಕಾರ್ಮಿಕರು
ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ನಗರದ ಬೆಂಗಳೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಯಿಂದ ಕಾಲ್ನಗೆಯಲ್ಲಿ ಪ್ರತಿಭಟಿಸುತ್ತಾ ಆಗಮಕಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಅಸಂಘಟಿತ ಕಾರ್ಮಿರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು
ಸಾಗಾಣಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಶ್ರಮಜೀವಿಗಳಾದ ಎಪಿಎಂಸಿ, ಮಿಲ್-ಗೋಡೌನ್-ವೇರಹೌಸ್, ನಗರ ಗ್ರಾಮೀಣ
ಬಜಾರ, ಬಸ್‌ ಸ್ಟ್ಯಾಂಡ್, ಬಂದರುಗಳಲ್ಲಿ ಲೋಡಿಂಗ್ ಅನ್‌ ಲೋಡಿಂಗ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರ ಬದುಕಿನ
ಪ್ರಮುಖ ಪ್ರಶ್ನೆಗಳಿಗಾಗಿ ಉಳಿದಿವೆ ಎಂದು ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಅಧ್ಯಕ್ಷ ನಿಂಗಣ್ಣ ಮಾತನಾಡಿ,
ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್
(ಸಿಐಟಿಯು) ನೇತೃತ್ವದಲ್ಲಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಈ ಮನವಿ ಪತ್ರವನ್ನು ತಮಗೆ ಸಲ್ಲಿಸುತ್ತಿದ್ದೇವೆ.
ಕರ್ನಾಟಕ ರಾಜ್ಯ ಸರಕಾರ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ
ಅಂಬೇಡ್ಕರ ಸಹಾಯ ಹಸ್ತ ಸ್ಟಾರ್ಟ ಪಡೆದ ಹಮಾಲಿ ಕಾರ್ಮಿಕರು ಸೇರಿದಂತೆ 23 ವಲಯದ ಅಸಂಘಟಿತ ಕಾರ್ಮಿಕರಿಗೆ
ಅಪಘಾತ ಮರಣ, ಅಪಘಾತ ಅಂಗವಿಕಲತೆ, ಅಪಘಾತ ವೈದ್ಯಕೀಯ ಮರು ಪಾವತಿ, ಶವ ಸಂಸ್ಕಾರ ಪರಿಹಾರ ನೀಡುವ
ಯೋಜನೆಗಳನ್ನು ಜಾರಿಮಾಡುತ್ತಿರುವುದು ಹಾಗೂ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ
ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ-2024ರ ಅಡಿ ರಚಿಸಲಾಗುತ್ತಿರುವ ಮಂಡಳಿಯಿಂದ ಸಾರಿಗೆ
ಸಂಬಂಧಿತ ಲೋಡಿಂಗ್ ಅನ್‌ಲೋಡಿಂಗ್‌ ಕಾರ್ಮಿಕರನ್ನು ಒಳಗೊಂಡು ವಿವಿಧ ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಕೆಲವು
ಸೌಲಭ್ಯಗಳನ್ನು ಘೋಷಿಸಲಾಗಿರುವುದು ಸ್ವಾಗತಾರ್ಹವಾಗಿದೆ ಎಂದರು.

ಬದುಕಿನ ಕೊನೆಗಾಲದಲ್ಲಿ ಆರ್ಥಿಕವಾಗಿ, ಅನಾರೋಗ್ಯದಿಂದ ಸಂಂಕಿಂಷಂಔಕಿಖಂಡಂಗಂನ ಹಮಾಲಿ
ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಬದುಕಿರುವಾಗ ಸಹಾಯವಾಗುವಂತ ಸಾಮಾಜಿಕ ಭದ್ರತಾ
ಸೌಲಭ್ಯಗಳ ಅಗತ್ಯತೆ ಇದೆ ಎನ್ನುವುದನ್ನು ಸರಕಾರ ಗಮನಿಸಬೇಕು. ಈ ಹಿನ್ನಲೆಯಲ್ಲಿ ಸಹಜ ಮರಣಕ್ಕೂ ಪರಿಹಾರ,
ಈಗಾಗಲೇ ಸರಕಾರದ ಮುಂದಿರುವ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷಂಚಿ’ ಯೋಜನೆ, ಪಿಂಚಣಿ ಯೋಜನೆ
ಹಾಗೂ ವಸತಿ ಯೋಜನೆಗಳನ್ನು ಜಾರಿಮಾಡುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಕೆಳಕಂಡ ಹಮಾಲಿ ಕಾರ್ಮಿಕರ
ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕೆಂದು

-ಬೇಡಿಕೆಗಳು:-

  1. 23 ವಲಯದ ಅಸಂಘಟಿತ ಕಾರ್ಮಿಕರಿಗೆ ಜಾರಿಮಾಡುತ್ತಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ ರೂ. 1 ಲಕ್ಷ ರೂಗಳ ಪರಿಹಾರ
    ನೀಡಬೇಕು ಹಾಗೂ ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ರೂ, 25 ಸಾವಿರಕ್ಕೆ ಹೆಚ್ಚಿಸಬೇಕು,
    2, ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ “ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷಂಚಿ, ” ಯೋಜನೆ” (ಪಶ್ಚಿಮ
    ಬಂಗಾಲ ಮಾದರಿ) ಜಾರಿಮಾಡಬೇಕು ಹಾಗೂ ಸೂಕ್ತ ಪಿಂಚಣಿ ಯೋಜನೆಯನ್ನು ಜಾರಿಮಾಡಬೇಕು.
  2. ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ “ಕಾಯಕ ನಿಧಿ” ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ
    ಪ್ರಯೋಜನಕಾರಿಯಾಗಿದ್ದು ಸರಕಾರದಿಂದ ಹಾಗೂ ಹಿಂದಿನಂತೆ ಎಪಿಎಂಸಿ ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಸೇವೆ ಪಡೆಯಬೇಕು ಎನ್ನುತ್ತಾರೆ ನಾಗರಾಜ್ .
Namma Challakere Local News
error: Content is protected !!