ಚಳ್ಳಕೆರೆ :
ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ
ಮೂಲಕ ಸ್ವಸ್ಥಾ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮ
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಿ.ಪಾಲಣ್ಣ ಹೇಳಿದರು.
ಅವರು ತಾಲೂಕಿನ ದೊಡ್ಡೆರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಅಪೌಷ್ಟಿಕತೆ ನಿವಾರಣೆ
ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದು,
ಅಪೌಷ್ಟಿಕತೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ
ರಾಷ್ಟ್ರೀಯ ಪೋರ್ಷನ್ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮ ಇದಾಗಿದೆ,
ಪೋಷಕಾಂಶಗಳು ದೊರೆಯುವ ಅಹಾರ ಪದಾರ್ಥಗಳು, ಅವುಗಳ
ಸೇವನೆ ಹಾಗೂ ಪೋಷಕಾಂಶಗಳ ಕೊರತೆಯಿಂದ ಬರುವ ರೋಗಗಳ
ಬಗ್ಗೆ ವಿಸ್ತಾರವಾಗಿ ಮುಖ್ಯೋಪಾಧ್ಯಾಯರಾದ ಸಿ.ನಾಗರಾಜ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಂಗೀತ, ಗ್ರಾಮ ಪಂಚಾಯಿತಿ ಸದಸ್ಯರು ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಭಾಗವಹಿಸಿದ್ದರು