ನವಜಾತ ಶಿಶುಗಳಲ್ಲಿ ಥಯಾಮಿನ್ ಡಿಫಿಷಿಯೆನ್ಸಿ ಎಂಬ ಕಾಯಿಲೆ ಪತ್ತೆ ಸಂಪ್ರದಾಯದ ಆಚರಣೆಗಳಿಂದ ಹೊರಬಂದು ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ವೈದ್ಯರ ಮನವಿ 

ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಸಂಪ್ರದಾಯದ ಆಚರಣೆಗಳಿಂದ ಬಾಣಂತಿಯರು ಪೌಷ್ಟಿಕಾಂಶದ ಕೊರತೆಯುಳ್ಳ ಆಹಾರವನ್ನು ಸೇವಿಸುತ್ತಿರುವುದರಿಂದ ಜನಿಸಿದ ಮಗುವಿನಲ್ಲಿ ಥೈಯಾಮಿನ್ ಡಿಫೆಸಿಯೆನ್ಸಿ ಎಂಬ ಕಾಯಿಲೆ ಕಾಣಿಸಿಕೊಂಡಿದ್ದು ಮಗು ಜನಿಸಿದ 15 ದಿನದಿಂದ ಆರು ತಿಂಗಳ ಒಳಗೆ ಸಾವನ್ನಪ್ಪುತ್ತಿರುವ ಘಟನೆಗಳು ಸಂಭವಿಸುತ್ತಿವೆ ಎಂದು ಮಂಜುನಾಥ ಮಕ್ಕಳ ಆಸ್ಪತ್ರೆ ವೈದ್ಯ ಡಾ. ಆರ್ ಮಂಜುನಾಥ್ ಬಾಬು ತಿಳಿಸಿದ್ದಾರೆ. 

ನಗರದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿರುವ ತಮ್ಮ ಆಸ್ಪತ್ರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಗು ಜನಿಸಿದ ನಂತರ ತಾಯಿಯ ಎದೆ ಹಾಲು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇಂತಹ ಆಧುನಿಕ ಕಾಲದಲ್ಲಿಯೂ ಹಳೆ ಸಂಪ್ರದಾಯಗಳನ್ನು ನಂಬಿಕೊಂಡು ಬಾಣಂತಿಗೆ ಬಸಿದ ಅನ್ನ ಬೇಳೆ ಕಟ್ಟು ಸಾರು ನೀಡುವುದಲ್ಲದೆ ಗಂಡು ಮಗು ಜನನವಾದಾಗ ಕಟ್ಟುನಿಟ್ಟಿನ ನೇಪಥ್ಯ ಇರಿಸುವುದರಿಂದ ತಾಯಿ ಮತ್ತು ಮಗುವಿಗೆ ಉತ್ತಮ ಪೌಷ್ಟಿಕಾಂಶ ದೊರೆಯದೆ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಉಂಟಾಗುವುದಲ್ಲದೆ ಎದೆ ಹಾಲು ಉಣಿಸಿದ ನಂತರ ಮಗುವಿನಲ್ಲಿ ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿವೆ ತಾಲೂಕಿನಲ್ಲಿ ಇಂತಹ ಸುಮಾರು 6 ಪ್ರಕರಣಗಳು ವರದಿಯಾಗಿದ್ದು ಮಗುವನ್ನು ಆಸ್ಪತ್ರೆಗೆ ತರುವ ಮುನ್ನವೇ ಸಾವನ್ನಪ್ಪುತ್ತಿದ್ದು ಇಂತಹ ಪ್ರಕರಣಗಳನ್ನು ತಪ್ಪಿಸಲು ನಮ್ಮ ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು ವೈದ್ಯರಿಗೂ ಸಹ ಈ ರೋಗ ತಡೆಗಟ್ಟಲು ಸವಾಲಿನ ಕೆಲಸವಾಗಿದ್ದು ಬೆಂಗಳೂರಿನ ಜಯದೇವ ಆಸ್ಪತ್ರೆ ವೈದ್ಯರ ಸಂಶೋಧನೆಯಿಂದ ಈ ರೋಗ ಪತ್ತೆಯಾಗಿದ್ದು ವೈದ್ಯರು ಸಹ ರೋಗದ ಲಕ್ಷಣಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತಿಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ವೈದ್ಯರ ಸಲಹೆಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಮಕ್ಕಳ ಮರಣದ ಪ್ರಮಾಣ ಹೆಚ್ಚಾಗುತ್ತಿದೆ. ಬಾಣಂತಿಯರಿಗೆ ಸಾಮಾನ್ಯ ಜನರು ಸೇವಿಸುವ ಹಾಲು ಹಣ್ಣು ಸೇರಿದಂತೆ ಎಲ್ಲಾ ಆಹಾರವನ್ನು ನೀಡುವುದರಿಂದ ಅವರ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಾಗಿ ಮಗುವಿಗೂ ಉತ್ತಮ ಪೋಷಕಾಂಶವುಳ್ಳ ಎದೆಹಾಲು ದೊರೆತು ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಆದ್ದರಿಂದ ಸಾರ್ವಜನಿಕರು ವೈದ್ಯರು ನೀಡುವ ಸಲಹೆಗಳನ್ನು ಕಟ್ಟನಿಟ್ಟಾಗಿ ಪಾಲನೆ ಮಾಡುವುದರಿಂದ ಇಂತಹ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಜಾಗೃತಗೊಳ್ಳುವುದು ಮುಖ್ಯವಾಗಿದೆ ಎಂದು ಮನವಿ ಮಾಡಿದರು.

ಸಂಜಯ್ ಆಸ್ಪತ್ರೆಯ ವೈದ್ಯ ಡಾ.ಸಂಜಯ್ ಮಾತನಾಡಿ ಈ ರೋಗದ ಬಗ್ಗೆ ಸಾರ್ವಜನಿಕರು ಅತಿಯಾದ ಆತಂಕ ಪಡುವ ಅಗತ್ಯವಿಲ್ಲ ಪಾರಂಪರಿಕ ಸಂಪ್ರದಾಯಗಳಿಂದ ಹೊರಬಂದು ಬಾಣಂತಿಯರಿಗೆ ಎಲ್ಲಾ ವಿಧದ ಆಹಾರ ಪದಾರ್ಥಗಳನ್ನು ನೀಡಿ ಮನೆಯಲ್ಲಿಯೇ ಉತ್ತಮ ವಾತಾವರಣ ನಿರ್ಮಿಸುವ ಮೂಲಕ ತಾಯಿ ಮತ್ತು ಮಗುವಿನ ಹಾರೈಕೆ ಮಾಡಿದಲ್ಲಿ ಇಂತಹ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

Namma Challakere Local News
error: Content is protected !!