ಚಳ್ಳಕೆರೆ : ಮಾನವರಾದ ನಾವುಗಳು ಸಮಾಜಕ್ಕಾಗಿ ನಿಸ್ವಾರ್ಥಸೇವೆ ಸಲ್ಲಿಸಿ, ನಮ್ಮ ದೇಶದ ಪರಂಪರೆಯಂತೆ ನಮ್ಮ ಬದುಕಿನುದ್ದಕ್ಕೂ ಸಹ ಕಾಯಕ, ಪ್ರಾರ್ಥನೆ, ಯೋಗ, ಧ್ಯಾನ, ಸತ್‌ಚಿಂತನೆ, ಸದಾಚಾರಗಳನ್ನು ಮನುಷ್ಯ ಜೀವಿತದಲ್ಲಿ ರೂಢಿಸಿಕೊಂಡರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಬಾಳೆಹೊನ್ನೂರು ಶಾಖಾ ಮಟವಾದ ಶ್ರೀ ಸುಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು


ಸಮೀಪದ ಪಿ ಗೌರೀಪುರ ಗ್ರಾಮದಲ್ಲಿ ಈಚೆಗೆ ಜಂಗಮರ ಮಠದ ಶ್ರೀ ಈಶ್ವರಲಿಂಗ ಮತ್ತು ಶ್ರೀ ನಂದಿ (ಬಸವಣ್ಣ) ಯ ನೂತನ ಶಿಲಾಮೂರ್ತಿಗಳ ವಿಗ್ರಹ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು ಪಿ ಗೌರೀಪುರ ಗ್ರಾಮವು ಐತಿಹಾಸಿಕ ಹಿನ್ನೆಲೆಯುಳ್ಳದ್ದು ಪ್ರಾಚೀನ ಕಾಲದಲ್ಲಿ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು, ಹಬ್ಬ ಹರಿದಿನಗಳನ್ನು ನಮ್ಮ ಪೂರ್ವಜರು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದ ಕುರುಹುಗಳಿವೆ ಪರಸ್ಪರ ಎಲ್ಲಾ ಸಮುದಾಯದವರು ಕೂಡ ಅನ್ಯೋನ್ಯತೆಯಿಂದ ಇದ್ದುದು ಕಂಡುಬಂದಿದೆ ನಾವುಗಳು ಈ ಸಂಸ್ಕೃತಿಯನ್ನು ಮಂದುವರೆಸಿಕೊಂಡು ಹೋಗಬೇಕು ಎಂದರು

ಶಾಸಕ ಟಿ ರಘುಮೂರ್ತಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ ಗ್ರಾಮಸ್ಥರು ಪರಸ್ಪರ ಸಹಕಾರ ಪ್ರೀತಿ ವಿಶ್ವಾಸದಿಂದ ಧಾರ್ಮಿಕ ಕಾರ್ಯ ಹಮ್ಮಿಕೊಂಡು ಗ್ರಾಮದ ಎಲ್ಲ ಸಮುದಾಯದವರು ಸಾಮರಸ್ಯತೆಯಿಂದ ಬದುಕುವ ಜೀವನ ಮೌಲ್ಯಗಳನ್ನ ಸಾರಿದ್ದಾರೆ. ಪರಶುರಾಮಪುರ ಹೋಬಳಿಯಲ್ಲಿ ಬಹುತೇಕ ಗ್ರಾಮಗಳು ಪುರಾಣ, ಐತಿಹಾಸಿಕ ಹಿನ್ನೆಲೆಯುಳ್ಳವಾಗಿವೆ ಈ ಗ್ರಾಮಗಳಲ್ಲಿನ ಧಾರ್ಮಿಕ ಕೇಂದ್ರಗಳೂ ಸೇರಿದಂತೆ ದೇವಸ್ಥಾನ, ಶಾಲೆ, ಕಾಲೇಜು, ಗ್ರಂಥಾಲಯ, ಶಿಶು ವಿಹಾರ ಕೇಂದ್ರಗಳನ್ನು ಅಭಿವೃಧ್ದಿಪಡಿಸಲು ಯೋಜನೆಯೊಂದನ್ನು ರೂಪಿಸಲಾಗುವುದು ಎಂದರು.


ಗ್ರಾಮದಲ್ಲಿ ಜಂಗಮರ ಮಠದ ಶ್ರೀ ಈಶ್ವರಲಿಂಗ ಮತ್ತು ಶ್ರೀ ನಂದಿ (ಬಸವಣ್ಣ)ಯ ನೂತನ ಶಿಲಾಮೂರ್ತಿಗಳ ವಿಗ್ರಹ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರು ಗಂಗಾಪೂಜೆ, ಧ್ವಜಾರೋಹಣ, ವಿಶ್ವಕಲ್ಯಾಣ ನಿಮಿತ್ತ ಮಹಾಸಂಕಲ್ಪದೊಂದಿಗೆ ಸ್ವಸ್ತಿಪುಣ್ಯಾಹನಾಚನ ನಾಂದಿ ಸಮಾರಾಧನಾ ಕಳಶಪೂಜೆ, ಗಣಹೋಮ ನವಗ್ರಹ ಹೋಮ, ಶ್ರೀ ರುದ್ರಾಭಿಷೇಕ ನಡೆಸಿ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಎರಡು ದಿನಗಳ ಕಾಲ ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು
ಸಂದರ್ಭದಲ್ಲಿ ಚಳ್ಳಕೆರೆಯ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ, ರಾಘವೇಂದ್ರ, ರಮೇಶ್ ಗೌಡ, ಸಿದ್ದಲಿಂಗಯ್ಯ, ಎಸ್ ಚನ್ನಕೇಶವ, ಮಂಜುನಾಥ, ಬಸವರಾಜು, ರಮೇಶ, ಗ್ರಾಪಂ ಉಪಾಧ್ಯಕ್ಷೆ ಲಕ್ಷö್ಮಮ್ಮಧನಂಜಯ, ರಾಘವೇಂದ್ರಗುಪ್ತ, ವಿಜಯಕುಮಾರ, ರಾಘವೇಂದ್ರ, ವಿವಿಧೆಡೆಯಿಂದ ಆಗಮಿಸಿದ್ದ ಜಂಗಮರ ಮಠದ ಕುಲ ಬಾಂಧವರು ದೇವಸ್ಥಾನ ಸಮಿತಿಯವರು ಗ್ರಾಮಸ್ಥರು ಇದ್ದರು

Namma Challakere Local News
error: Content is protected !!