ಚಳ್ಳಕೆರೆ : ಪ್ರಯಾಣಿಕರ ಬ್ಯಾಗ್ ಕದ್ದು ಕಳ್ಳತನ ಮಾಡುವ ಲೇಡಿ ಇಂದು ಪೊಲೀಸರ ಅತಿಥಿಯಾಗಿದ್ದಾಳೆ


ಹೌದು ಕಳೆದ ಮೆ.23 ರಂದು ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತುಮಕೂರು ನಗರದ ಶ್ರೀನಗರ ವಾಸಿಯಾದ ಶಿಲ್ಪರವರು

ತುಮಕೂರಿಗೆ ಹೋಗುವ ಬಸ್ ಹತ್ತುತ್ತಿರುವಾಗ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಕಳ್ಳ ಲೇಡಿ 20 ಗ್ರಾಂ ತೂಕದ ಬಂಗಾರದ ನೆಕ್ಲೆಸ್ ಮತ್ತು 1500.ರೂ ಹಣವನ್ನು ಕದಿಯುತ್ತಿರುವ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ಆಧಾರದ ಮೇಲೆ ಬೆಲೆ ಬಿಸಿದ ನಗರ ಕೋಟೆ ಪೊಲೀಸರು ಶೀಘ್ರ ಕಾರ್ಯಚರಣೆಯಲ್ಲಿ ಲೇಡಿಯನ್ನು ಹಿಡಿಯುವಲ್ಲಿ ಯಶಶ್ವಿಯಾಗಿದ್ದಾರೆ.
ಕಳ್ಳತನದ ಜಾಡು ಹಿಡಿದು ಆರೋಪಿತರನ್ನು ಪತ್ತೆಮಾಡಲು ಡಿ.ವೈ.ಎಸ್.ಪಿ ಎಸ್.ಪಾಂಡುರಂಗ ಮಾರ್ಗದರ್ಶನದಲ್ಲಿ ಬಲೆಬೀಸಿದ ಅವರು

ಲಕ್ಷ್ಮಿ‌

ಎಂಬ ಲೇಡಿ ಯನ್ನು ಬಂದಿಸಿದ್ದಾರೆ.


ಪೊಲೀಸ್ ನಿರೀಕ್ಷಕರಾದ ಎಂ.ಎಸ್ ರಮೇಶ್‌ರಾವ್ ರವರ ನೆತೃತ್ವದಲ್ಲಿ ಸಿಬ್ಬಂದಿ ಬಾಬು, ಚಿದಾನಂದ, ಷಣ್ಮುಖ, ಮೊಹನ್ ನಾಯ್ಕ, ನಾಗರಾಜ ಹಲುವಾಗಿಲು, ಮತ್ತು ಮಹಿಳಾ ಸಿಬ್ಬಂದಿ ಬಿಂದುಶ್ರೀ ರವರ ತಂಡ ರಚಿಸಿದ್ದು, ಸದರಿಯವರು ಆರೋಪಿಯ ಪತ್ತೆಯ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತಳಾದ ಲಕ್ಷ್ಮೀ ಶ್ರೀರಾಂಪುರ ಗ್ರಾಮ, ಹೊಸದುರ್ಗ ತಾಲ್ಲೂಕು ಇವರನ್ನು ಮೇ.24 ರಂದು ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯ ಸಂತೆ ಹೊಂಡದ ಕಡೆ ಹೋಗುವ ರಸ್ತೆಯಲ್ಲಿ ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ 20 ಗ್ರಾಂ ತೂಕದ ಅಂದಾಜು 80,000/- ರೂ ಬೆಲೆ ಬಾಳುವ ಬಂಗಾರದ ನೆಕ್ಲೆಸ್ ಮತ್ತು 1500 ನಗದು ಹಣವನ್ನು ಚುರುಕಿನ ಕಾರ್ಯಚರಣೆ ನಡೆಸಿ ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಆರೋಪಿತಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.


ಈ ಶೀಘ್ರ ಕಾರ್ಯಚರಣೆಗೆ ಪೊಲೀಸ್ ಅಧೀಕ್ಷಕರಾದ ಕೆ.ಪರುಶರಾಮ್ ಶ್ಲಾಘಿಸಿದ್ದಾರೆ.

About The Author

Namma Challakere Local News
error: Content is protected !!