ಚಳ್ಳಕೆರೆ : ಬೆಳ್ಳಂ ಬೆಳಗ್ಗೆ ಚಿಕನ್ ಹಾಗೂ ಮಟನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಧಿಕಾರಿಗಳ ತಂಡ ಅಂಗಡಿ ಮಾಲಿಕರಿಗೆ ಶಾಕ್ ನೀಡಿದ್ದಾರೆ.


ಚಳ್ಳಕೆರೆ ನಗರದ ಅಜ್ಜಯನ ಗುಡಿ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕ ಓಡಾಟಕ್ಕೆ ತೊಂದರೆ ಮಾಡುತ್ತಾ ರಸ್ತೆಯ ಇಕ್ಕೆಲೆಗಳಲ್ಲಿ ಚಿಕನ್ ಹಾಗೂ ಮಟನ್ ಅಂಗಡಿ ಗಳಿಂದ ತ್ಯಾಜ್ಯ ಇತರೆ ವಸ್ತುಗಳನ್ನು ಸುತ್ತಮುತ್ತ ಹಾಕಿ, ನಗರವನ್ನು ಅಶುದ್ಧ ಗೊಳಿಸುತ್ತಾರೆ ಎನ್ನುವ ಸಾರ್ವಜನಿಕರ ದೂರಿನ ಮೇರೆಗೆ ಇಂದು ದಾಳಿ ನಡೆಸಿ ಕೆಲವು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.


ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್‌ಇಲಾಖೆ ಸಹಯೋಗದೊಂದಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಮಟನ್ ಹಾಗೂ ಚಿಕನ್ ಅಂಗಡಿಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ಇರುವಂತಹ ಅಂಗಡಿಗಳನ್ನು ತೆರವುಮಾಡಿ ಹಾಗೆ ಕೋಳಿ ಇತರ ವಸ್ತುಗಳಿಂದ ಬಂದಂತಹ ತ್ಯಾಜ್ಯವನ್ನು ಅಲ್ಲಿಯೇ ಬಿಸಾಡುವುದರಿಂದ ನಗರ ತ್ಯಾಜ್ಯದಿಂದ ಕೂಡಿದ್ದು ಇದರಿಂದ ತ್ಯಾಜ್ಯವನ್ನು ದೂರ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಪರವಾನಗೆ ಪಡೆದು ಅಂಗಡಿ ನಡೆಸಬೇಕು ಎಂದು ಹೇಳಿದರು.


ಮಟನ್ ಚಿಕನ್ ಮಾರುವ ಅಂಗಡಿಗಳು ಶುದ್ಧವಾಗಿರಬೇಕು, ಇಲ್ಲಿ ಯಾವ ಅಂಗಡಿ ನೋಡಿದರು ತ್ಯಾಜ್ಯದಿಂದ ಕೂಡಿದ್ದು ಇಲ್ಲಿ ಮಾರುವಂತಹ ಎಲ್ಲ ವಸ್ತುಗಳು ಅಶುದ್ಧವಾಗಿವೆ ಇಂತಹ ಆಹಾರವನ್ನು ಸೇವಿಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪಾರಿಣಮ ಬೀರುತ್ತದೆ.


ಈಗಾಗಲೇ ಈ ನಗರದಲ್ಲಿ ಕೋವಿಡ್‌ನಿಂದ ಹಲವರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಹೀಗೆ ಅಶುದ್ಧವಾದ ಚಿಕನ್ ಹಾಗೂ ಮಟನ್ನು ಮಾರಾಟ ಮಾಡಬಾರದು, ಇಲ್ಲವಾದಲ್ಲಿ ಜನ ಆರೋಗ್ಯದ ಜೀವನದ ಜತೆ ಚಲ್ಲಾಟವಾಡಿದಂತ್ತಾಗುತ್ತದೆ ಎಂದರು.


ಈ ಸಮಯದಲ್ಲಿ ಪಿಎಸ್‌ಐ ಕೆ.ಸತೀಶ್‌ನಾಯ್ಕ್, ನಗರಸಭೆ ಆರೋಗ್ಯ ಅಧಿಕಾರಿ ಮಹಾಲಿಂಗಪ್ಪ, ದಾದಾಪೀರ್, ಹಾಗೂ ನಗರಸಭೆ ಅಧಿಕಾರಿಗಳು ಪೋಲೀಸ್ ಸಿಬ್ಬಂದಿ ಕಂದಾಯ ಇಲಾಕೆಯ ಗ್ರಾಮ ಲೆಕ್ಕಿಗಾ ಉಮೇಶ್ ಇದ್ದರು.

Namma Challakere Local News
error: Content is protected !!