ದೇವಸ್ಥಾನ ಕಟ್ಟುವ ಜಾಗದ ಮುಂದೆ ಸಾರ್ವಜನಿಕ ಶೌಚಾಲಯ ಕಟ್ಟದಂತೆ ಶಾಸಕ ಟಿ.ರಘುಮೂರ್ತಿಗೆ ಕುರುಹಿನ ಶೆಟ್ಟಿ ಸಮುದಾಯದಿಂದ ಮನವಿ
ಚಳ್ಳಕೆರೆ : ನೀಲಕಂಠೇಶ್ವರ ದೇವಸ್ಥಾನ ನಿರ್ಮಿಸುವ ಜಾಗದ ಮುಂದೆ “ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ನಗರಸಭೆ ಮುಂದಾಗಿರುವುದು ಖಂಡನೀಯ ಆದ್ದರಿಂದ ನಮಗೆ ನಮ್ಮ ಸಮುದಾಯದಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕುರುಹಿನ ಶೆಟ್ಟಿ ಸಮುದಾಯದ ಪದಾಧಿಕಾರಿಗಳು ಶಾಸಕ ಟಿ.ರಘುಮೂರ್ತಿ ಗೆ ಮನವಿ ನೀಡಿದರು.
ನಿವೃತ್ತಿ ಶಿಕ್ಷಕ ಹೆಚ್.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಈ ಹಿಂದೆ ನಮ್ಮ ಕುರುಹಿನ ಶೆಟ್ಟಿ ಜನಾಂಗಕ್ಕೆ ಚಿತ್ರದುರ್ಗ ರಸ್ತೆಯಲ್ಲಿ ಶ್ರೀನೀಲಕಂಠೇಶ್ವರ ದೇವಸ್ಥಾನ ನಿರ್ಮಿಸಲಿಕ್ಕಾಗಿ ಜಾಗ ನೀಡಲಾಗಿತ್ತು, ಇಲ್ಲಿ ಸಮಾಜದ ಸಮುದಾಯ ಭವನವನ್ನು ನಿರ್ಮಿಸಿದ್ದೇವೆ ಪ್ರಸ್ತುತ ದೇವಸ್ಥಾನವನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದೇವೆ. ಆದರೆ ಈಗ ನಮ್ಮ ಜಾಗದ ಮುಂಭಾಗದಲ್ಲಿ ಚಳ್ಳಕೆರೆ ನಗರಸಭೆಯವರು “ಸಾರ್ವಜನಿಕ ಶೌಚಾಲಯ” ನಿರ್ಮಿಸಲು ಮುಂದಾಗಿರುವ ವಿಷಧಕರ ದೇವಸ್ಥಾನದ ಮುಂದೆ ಶೌಚಾಲಯ ಕಟ್ಟುವುದು ಸರಿಯೇ? ಇದು ಜನ ಸಂದಣಿ ಅತ್ಯಂತ ಕಡಿಮೆ ಇರುವ ಪ್ರದೇಶ, ಇಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲ ಬಸ್ ತಂಗುದಾಣ ಅಥವಾ ಸಂತೆ ನಡೆಯುವ ಸ್ಥಳವೂ ಅಲ್ಲ. ಹಾಗಾಗಿ ಇಲ್ಲಿ ಸಾರ್ವಜನಿಕ ಶೌಚಾಲಯ” ನಿರ್ಮಿಸದಂತೆ ತಾವು ನಗರ ಸಭೆಯವರಿಗೆ ತಿಳಿಸಬೇಕಾಗಿ ಕೋರುತ್ತೇವೆ ಎಂದರು.
ಅಧ್ಯಕ್ಷ ಇ.ಶ್ರೀನಿವಾಸಲು ಮಾತನಾಡಿ, ನಮ್ಮ ಸ್ಥಳದ ಹಿಂಭಾಗದಲ್ಲಿ ತ್ಯಾಗರಾಜ ನಗರ ಬಡವಣೆಗೆ ಕುಡಿಯುವ ನೀರು ಪೂರೈಸುವ 10 ಲಕ್ಷ ಗ್ಯಾಲನ್ ಸಾಮರ್ಥ್ಯದ ನೀರಿನ ಟ್ಯಾಂಕ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಕೂಡ ಇದ್ದು ಜೊತೆಗೆ ಪರಿಸರ ಮಾಲಿನ್ಯಕ್ಕೆ ಧಕ್ಕೆ ಬರುವ ಸಂಭವವೂ ಇದೆ. ದೇವಸ್ಥಾನಗಳ ಪಾವಿತ್ರ‍್ಯತೆ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದ ಹಾಗೆ, ಸಾರ್ವಜೆನಿಕ ಹಿತದೃಷ್ಟಿಯಿಂದಲೂ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ ದಯವಿಟ್ಟು ಈ ಕುರಿತು ನಗರ ಸಭೆಯವರಿಗೆ ಸೂಚಿಸಿ, ಈ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ಜಾಗಕ್ಕೆ ಸ್ಥಳಾಂತರಿಸಬೇಕಾಗಿ ಮನವಿ ನೀಡಿದರು.
ಇದೇ ಸಂಧರ್ಭದಲ್ಲಿ ಅಧ್ಯಕ್ಷ ಇ ಶ್ರೀನಿವಾಸಲು, ಉಪಾಧ್ಯಕ್ಷ ಕೆ.ನಾಗಪ್ಪ, ಕಾರ್ಯದರ್ಶಿ ಆರ್.ಹೊನ್ನಪ್ಪ, ಖಜಾಂಚಿ ಕೆ.ಗಣೇಶ್, ನಿರ್ದೇಶಕ ಟಿ.ಎಸ್.ಮಂಜುನಾಥ್, ಡಿ.ಚಂದ್ರಶೇಖರಯ್ಯ, ವಿರೇಶ್, ಹೆಚ್.ಎಸ್.ತಿಪ್ಪೇಸ್ವಾಮಿ, ಶಿವು, ಸುರೇಶ್, ರಾಮಕೃಷ್ಣಪ್ಪ, ವಿಜಯ್ ಕುಮಾರ್, ಇತರರು ಹಾಜರಿದ್ದರು.