ಚಳ್ಳಕೆರೆ : ವಿಶ್ವ ಹಿಂದೂ ಮಹಾಗಣಪತಿಯ ಅದ್ದೂರಿ ಶೋಭಾಯಾತ್ರೆ
ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆಮ್ಮಿಕೊಂಡಿದ್ದ ಆರನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಮಹೋತ್ಸವದ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಿತು.
ನಗರದ ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆರನೇ ಭಾರಿಗೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ್ದರು ಸೆ.23ರ ಸೋಮವಾರÀ ಶೋಭಾಯಾತ್ರೆಗೆ ಹಲವು ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಬಿಇಓ ಆವರಣದಿಂದ ಚಾಲನೆಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದಿಂದ ಅಂಬೇಡ್ಕೆರ್ ವೃತ್ತ ಹಾಗೂ ನೆಹರು ವೃತ್ತ, ಬಸವೇಶ್ವರ ವೃತ್ತದಿಂದ ವಾಪಸ್‌ಹಾಗಿ ಮತ್ತೆ ಬಳ್ಳಾರಿ ರಸ್ತೆಯ ಮೂಲಕ ಸಾವಿರಾರು ಜನಸಾಗರದ ಮೂಲಕ ಸಾಗಿತು ಈ ಬೃಹತ್ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಭಾಗದ ಪಡ್ಡೆ ಹುಡುಗರು, ಹುಡುಗಿಯರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿ ಕಂಡು ಬಂದಿತು, ಮೂರು ಡಿಜೆ ಸೌಂಡ್‌ಗೆ ಹದಿಹರೈದವರು ಜೊತೆಗೆ ಮಹಿಳೆಯರು ಹೆಜ್ಜೆಹಾಕಿದರು.
ಮೆರವಣಿಗೆಯಲ್ಲಿ ಡೋಲುಕುಣಿತ, ವಾಧ್ಯವೃಂಧ, ಕೀಲುಕುದುರೆ, ಮೂರು ಡಿಜೆ ಸೌಂಡ್ ಸಿಸ್ಟ್ಂ, ವಿಶೇಷವಾಗಿ ವೇಷಧಾರಿಗಳು ಭಾಗವಹಿಸಿದ್ದರು. ನಗರದ ಪ್ರಮುಖ ರಾಜ ಬೀದಿಗಳಲ್ಲಿ ಬೃಹತ್ ಮೆರವಣಿಗೆಗೆ ತಾಲೂಕಿನ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಸಾಕ್ಷಿಯಾಯಿತು.
ಶೋಭಾಯಾತ್ರೆಯ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಗೌರವ ಅಧ್ಯಕ್ಷ ಶಿವಪುತ್ರಪ್ಪ, ವಿ.ವೈ.ಪ್ರಮೋದ್, ವಿಶುಕುಮಾರ್, ಬೇಕರಿ ಮಂಜುನಾಥ್, ಹಿತೇಶ್ ಜೈನ್,ಚಿದಾನಂದ್, ಸುರೇಂದ್ರ, ಮೋಹನ್ ಕುಮಾರ್, ಉಮೇಶ್, ಮನೋಜ್ ಹೊಸಮನೆ, ಶ್ರೀಧರ್ ಚಾರ್, ಇನ್ನೂ ಉತ್ಸವ ಸಮಿತಿ ಗೌರವ ಅಧ್ಯಕ್ಷ ಅನಂತರಾಮ ಗೌತಮ್, ಅಧ್ಯಕ್ಷ ಕೆ.ಸಿ.ನಾಗರಾಜ್, ಎನ್.ಓಬಳೇಶ್, ಮಾಜಿ ಸದಸ್ಯ ಜಿ.ಪಿ.ಜಯಪಾಲಯ್ಯ, ಬಾಳೆಕಾಯಿ ವೆಂಕಟೇಶ್, ಮಾತೃಶ್ರೀ ಮಂಜುನಾಥ್, ಎಸ್.ಎಂ.ಗAಗಾಧರ, ಕೆ.ಎಂ.ಯತೀಶ್, ಪೋಲಿಸ್ ವೀರಣ್ಣ, ಸಂಜೀವಮೂರ್ತಿ, ಸತೀಶ್ ಕುಮಾರ್, ಶಿವಪುತ್ರಪ್ಪ, ಶ್ರೀನಿವಾಸ್, ಭಾಗವಸಿದ್ದರು.
ಮಜ್ಜಿಗೆ ವಿತರಣೆ :
ಹಿಂದೂ ಮಹಾಗಣಪತಿ ಸಾಗುವ ದಾರಿ ಮಧ್ಯದುಕ್ಕೂ ದಾನಿಗಳು ಜೈನ್ ಸಂಘ , ವಾಹನ ಚಾಲಕರು ಹಾಗೂ ಇತರೆ ಹಲವು ಸಂಘ ಸಂಸ್ಥೆಗಳು ಮಜ್ಜಿಗೆ, ನೀರು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಗಿ ಪೊಲೀಸ್ ಬಂದ್‌ಬಸ್ತ್ :
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಮುಂಜ್ರಾಗತ ಕ್ರಮವಾಗಿ ಬಿಎಸ್‌ಎಪ್, ಸಿಪಿಐ., ಪಿಎಸ್‌ಐ., ಎಎಸ್‌ಐ., ಹೆಚ್‌ಸಿ-ಪಿಸಿ., ಮಹಿಳಾ ಪೊಲೀಸ್, ಹೆಚ್‌ಸಿ. ನೆಮಿಸಿಲಾಗಿತ್ತು, ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಾಗುವ ಸ್ಥಳಗಳಲ್ಲಿ ಹೈ ಅಲರ್ಟ್ ಮಾಡಲಾಗಿತ್ತು. ಡಿವೈಎಸ್‌ಪಿ ಬಿಟಿ.ರಾಜಣ್ಣ, ವೃತ್ತ ನಿರೀಕ್ಷಕ ಆರ್.ಎಪ್.ದೇಸಾಯಿ, ಪಿಎಸ್‌ಐ. ಬಸವರಾಜ್, ಪಿಎಸ್‌ಐ ಶಿವರಾಜ್, ಪಿಎಸ್‌ಐ ಧರೇಪ್ಪ ಬಾಳಪ್ಪ ದೊಡ್ಡಮನಿ, ಸಿಬ್ಬಂದಿಯೊAದಿಗೆ ಭದ್ರತೆಯಿಂದ ಮೆರವಣಿಗೆ ಸಾಗಿತು.
ಪೋಟೋ.1.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ನೆರೆದಿದ್ದ ಜನಸ್ತೋಮ.
ಪೋಟೋ.2.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಗಣ್ಯರ ಚಾಲನೆ
ಪೋಟೋ.3.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಮಹಿಳಾ ಮಣಿಗಳು.
5.ವಾಹನ ಚಾಲಕರ ಸಂಘದಿAದ ಮಜ್ಜಿಗೆ ವಿರಣೆ ಮಾಡಿದರು.