ಚಳ್ಳಕೆರೆ :
ದೇಶ ವಿದೇಶಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಇಂದು ಹೆಚ್ಚಾಗಿದೆ, ಆದ್ದರಿಂದ ಆಂಗ್ಲ ಭಾಷೆಯ ಅರಿವು ಪ್ರಸ್ತುತ ಜಗತ್ತಿಗೆ ಅವಶ್ಯವಾಗಿದೆ, ಈ ವಿದ್ಯಮಾನಕ್ಕೆ ಪ್ರಸ್ತುತ ಆಂಗ್ಲ ಭಾಷೆಯ ಅರಿವು ಮಕ್ಕಳಿಗೆ ಅವಶ್ಯಕವಾಗಿದೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರಾಜೇಶ್ ಗುಪ್ತ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಇಂಪಿರಿಯಲ್ ಎಜುಕೇಶನಲ್ ಸೆಂಟರ್ ಪರ್ ಎಕ್ಸಲೆನ್ಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಜಾಯ್ ಆಫ್ ಲರ್ನಿಂಗ್ ಜಾಗೃತಿ ಜಾಥವನ್ನು ಉದ್ಘಾಟಿಸಿ ಮಾತನಾಡಿದರು.

ಚಟುವಟಿಕೆ ಆಧಾರಿತ ಕಲಿಕೆ ಆಂಗ್ಲಭಾಷೆಯ ಉದ್ದೇಶವಾಗಿ ಇದರ ಅನುಸಾರ ಒಳಗೊಂಡಂತಹ ಆಂಗ್ಲ ಭಾಷೆಯ ಕಲಿಕೆ ಮಕ್ಕಳಿಗೆ ಆಸಕ್ತಿ ದಾಯಕವಾಗಿದೆ ಆದ್ದರಿಂದ ಈ ಆಧುನಿಕ ಜಗತ್ತಿಗೆ ಹಾಗೂ ಪ್ರಸ್ತುತ ದಿನಮಾನಗಳ ಒಳಗೊಂಡಂತೆ ಆಂಗ್ಲ ಭಾಷೆಯು ಎಲ್ಲೆಡೆ ಪಸರಿಸುತ್ತದೆ ಆದ್ದರಿಂದ ಇದರ ಮಹತ್ವ ಹಾಗೂ ಸರಪಳಿಯ ಮೂಲಕ ಮಕ್ಕಳು ಗ್ರಹಿಸಲು ಸುಲಭವಾಗಲಿದೆ ಎಂದರು

ಸಂಸ್ಥೆಯ ಕಾರ್ಯದರ್ಶಿ ದಯಾನಂದ ಪ್ರಹ್ಲಾದ್ ಮಾತನಾಡಿ, ಮಕ್ಕಳು ಆಂಗ್ಲ ಭಾಷೆಯ ಮಹತ್ವ ಹಾಗೂ ಭಾಷೆಯ ಉಪಯೋಗಿಸುವ ಬಗ್ಗೆ ವಿಸ್ತಾರವಾಗಿ ಅರಿವು ಮೂಡುವುದು ಇಂತಹ ಪಾಠಭೋಧನೆಯಿಂದ ಮಾತ್ರ ಇಂತಹ ಭೋಧನೆ ಸಂಸ್ಥೆಯಲ್ಲಿ ನೀಡುವುದು ಸಂತೋಷ ತಂದಿದೆ,
ಅದರಂತೆ ಆಂಗ್ಲ ಭಾಷೆ ಕಲಿಕೆ ಸುಲಬೀಕರಿಸಲು ಇಂತಹ ಚಟುವಟಿಕೆಯುಕ್ತ ಆಸಕ್ತಿದಾಯಕ ಕಲಿಕೆ ನೀಡುತ್ತದೆ ಎಂದರು.

ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಅಧಿಕಾರಿ ಹರಿಪ್ರಸಾದ್ ಮಾತನಾಡಿ,
ವಿಶ್ವವ್ಯಾಪ್ತಿ 17 ನೇ ಶತಮಾನದಿಂದ ಆಧುನಿಕ ಇಂಗ್ಲಿಷ್ ಪ್ರಪಂಚದಾದ್ಯಂತ ಹರಡಿತು. ಹಲವು ದೇಶಗಳಲ್ಲಿ ಎಲ್ಲಾ ರೀತಿಯ ಮುದ್ರಿತ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ, ಇಂಗ್ಲಿಷ್ ಅಂತರರಾಷ್ಟ್ರೀಯ ಪ್ರವಚನದ ಪ್ರಮುಖ ಭಾಷೆಯಾಗಿದೆ ಮತ್ತು ಅನೇಕ ಪ್ರದೇಶಗಳಲ್ಲಿ ಮತ್ತು ವಿಜ್ಞಾನ, ಸಂಚರಣೆ ಮತ್ತು ಕಾನೂನಿನಂತಹ ವೃತ್ತಿಪರ ಸಂದರ್ಭಗಳಲ್ಲಿ ಆಂಗ್ಲ ಭಾಷೆ ಮಹತ್ವ ಪಡೆದಿದೆ ಎಂದರು.

ಜಾಗೃತಿ ಜಾಥ ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯಿಂದ ನಗರದ ಸೊಮಗುದ್ದು ರಸ್ತೆ ಮೂಲಕ ವಾಲ್ಮೀಕಿ ವೃತ್ತದಲ್ಲಿ ಜಾಯ್ ಆಫ್ ಲರ್ನಿಂಗ್ ಆಂಗ್ಲ ಭಾಷೆಯ ಸಾಹಿತ್ಯಕ್ಕೆ ಮಕ್ಕಳು ನೃತ್ಯ ಮಾಡುತ್ತ ಆಂಗ್ಲ ಭಾಷೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಜಾಗೃತಿ ಉದ್ದಕ್ಕೂ ಮಕ್ಕಳು ಘೋಷಣೆಗಳನ್ನು ಕೂಗತ್ತು ನಾಗರೀಕರಲ್ಲಿ‌ ಆಂಗ್ಲ ಭಾಷೆಯ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಅಧಿಕಾರಿ ಹರಿಪ್ರಸಾದ್, ವಕೀಲರಾದ ಗುರುಮೂರ್ತಿ, ಸಂಸ್ಥೆಯ ಅಧ್ಯಕ್ಷ ರಾಜೇಶ್ ಗುಪ್ತ, ಉಪಾಧ್ಯಕ್ಷ ಮಧುಸೂದನ್, ಕಾರ್ಯದರ್ಶಿ ದಯಾನಂದ್ ಪ್ರಹ್ಲಾದ್, ಆಡಳಿತ ಅಧಿಕಾರಿ ಮಹದೇವ್ , ಮುಖ್ಯ ಶಿಕ್ಷಕ ಡಿವಿಎನ್ ಪ್ರಸಾದ್, ಐ ಇಸಿಇ ಈ ಕೋಡಿನೇಟರ್ ಬಶೀರ್ ಅಹ್ಮದ್, ಶಿಕ್ಷಕರಾದ ಶೋಭಾ , ಶೈಲಜಾ, ಪ್ರಿಯಾಂಕ ಅರ್ಜುನ್, ಹಾಗೂ ಶಾಲಾ ಮಕ್ಕಳು ಇತರ ಶಿಕ್ಷಕರು ಜಾಗೃತಿ ಜಾತದಲ್ಲಿ ಪಾಲ್ಗೊಂಡಿದ್ದರು

About The Author

Namma Challakere Local News

You missed

error: Content is protected !!