ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆರನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಇದೇ ಸೆ.23ರಂದು ನಡೆಯಲಿದೆ ಆದ್ದರಿಂದ ತಾಲೂಕಿನ ಸಮಸ್ತ ಭಕ್ತಾಧಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯೋಭಾಯಾತ್ರೆ ಯಶಸ್ವಿಗೊಳಿಸಬೇಕು ಎಂದು ಶೋಭಾಯಾತ್ರೆಯ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಮನವಿ ಮಾಡಿದರು.
ಅವರು ನಗರದ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ಆವರಣದಲ್ಲಿ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಆರನೇ ವರ್ಷದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯನ್ನು ಯಶ್ವಿಸಿಗೊಳಿಸಬೇಕು ನಗರದ ವಾಲ್ಮೀಕಿ ವೃತ್ತದಿಂದ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಶೋಭಾಯಾತ್ರೆ ಅಂಬೇಡ್ಕರ್ ವೃತ್ತ, ನೆಹರು ವೃತ್ತ, ಬಸವೇಶ್ವರ ವೃತ್ತದಿಂದ ಮತ್ತೆ ಚಳ್ಳಕೆರೆಮ್ಮ ದೇವಾಸ್ಥನದವರೆಗೆ ವಿವಿಧ ಕಲಾ ತಂಡಗಳ ಮೂಲಕ ಮೂರು ಡಿಜೆ ಸೌಂಡ್, ಬೆಳಕಿನೊಂದಿಗೆ ವಿಜೃಂಭಣಿಯಾಗಿ ಈ ಬಾರಿ ಉತ್ಸವ ನಡೆಯುತ್ತದೆ ಎಲ್ಲಾರ ಸಹಕಾರ ಹಾಗೂ ಸಹಭಾಗಿತ್ವ ಅವಶ್ಯಕವಾಗಿದೆ ಎಂದರು.
ಇನ್ನೂ ಹಿಂದೂ ಮಹಾಗಣಪತಿ ಸಮಿತಿಯ ಪದಾಧಿಕಾರಿ ಜಯಪಾಲಯ್ಯ ಮಾತನಾಡಿ, ಮಧ್ಯಕರ್ನಾಟಕದ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಏಷ್ಯಾದ ಎರಡನೇ ಅತೀ ದೊಡ್ಡ ಉತ್ಸವ ಸ್ಥಾನದಲ್ಲಿ ಬೃಹತ್ ಶೋಭಾಯಾತ್ರೆ ನಡೆಯುತ್ತದೆ, ಅದರಂತೆ ಚಳ್ಳಕೆರೆಯಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಇಲ್ಲಿನ ಬಜರಂಗದಳದ ಕಾರ್ಯಕರ್ತರು ಹಿಂದೂ ಸಂಘಟನೆಗಳ ಒಕ್ಕೂಟದಿಂದ ಸೆ.23ರಂದು ಚಳ್ಳಕೆರೆ ನಗರದಲ್ಲಿ ಜನಸ್ತೋಮ ಸೇರಲಿದೆ, ಇದಕ್ಕೆ ತಕ್ಕಂತೆ ಪೂರ್ವಸಿದ್ದತೆಯಾಗಿ ಸು.100 ಜನ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಯಾವುದೇ ಅವಘಡಗಳು ಜರುಗದಂತೆ ಬಿಗಿ ಪೊಲೀಸ್ ಬಂದ್ ಬಸ್ತ್ ಆಯೋಜಿಸಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಶೋಭಾಯಾತ್ರೆ ಗೌರವ ಅಧ್ಯಕ್ಷ ಶಿವಪುತ್ರಪ್ಪ, ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಜಯಪಾಲಯ್ಯ, ಉಫಾಧ್ಯಕ್ಷ ವಿ.ವೈ.ಪ್ರಮೋದ್, ಬಾಲೆಕಾಯಿ ವೆಂಕಟೇಶ್, ಶ್ರೀನಿವಾಸ್, ವಿಶುಕುಮಾರ್, ಬೇಕರಿ ಮಂಜುನಾಥ್, ಡಾ.ಮಂಜುನಾಥ್, ಯತೀಶ್, ಶ್ರೀನಿವಾಸ್, ನಾಗೇಶ್ ಬಾಬು, ಸಂಜೀವ ಮೂರ್ತಿ, ಮಾತೃಶ್ರೀ ಮಂಜುನಾಥ್, ಚಿದಾನಂದ, ಹಿತೇಶ್ ಜೈನ್, ಸುರೇಂದ್ರ ಸಿಂಗ್, ಮೋಹನ್ ಕುಮಾರ್, ಉಮೇಶ್, ಮನೋಜ್ ಹೊಸಮನೆ, ಶ್ರೀಧರ್ ಚಾರ್, ಜಗದೀಶ್, ಬಾಲಕೃಷ್ಣ, ಮಹಾಂತೇಶ್, ಬಾಲಕೃಷ್ಣ, ಮಾರುತಿ ಇತರರು ಇದ್ದರು.

Namma Challakere Local News
error: Content is protected !!