ವಿದ್ಯಾರ್ಥಿಗಳು ಶಾಲೆಗೆ ಮತ್ತು ಗ್ರಾಮಕ್ಕ ಕೀರ್ತಿಯನ್ನು ತರುವ ಹಾಗೆ ಶಿಕ್ಷಣವನ್ನು ಕಲಿಯಬೇಕು ಅಬ್ಬೇನಹಳ್ಳಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಬಿ. ಶಂಕರ್ ಸ್ವಾಮಿ,

ನಾಯಕನಹಟ್ಟಿ:: ಸೆ. 20. ಅಬ್ಬೇನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಶಾಲೆಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಅಬ್ಬೇನಹಳ್ಳಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಬಿ. ಶಂಕರ್ ಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ
ಮಲ್ಲೇಬೋರನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಕ್ಷರ ಫೌಂಡೇಶನ್ ಸಹಯೋಗದೊಂದಿಗೆ ಗಣಿತ ಕಲಿಕಾ ಆಂದೋಲನ ಅಡಿಯಲ್ಲಿ 4.5.ಮತ್ತು 6ನೇ ತರಗತಿಯ ಮಕ್ಕಳ ಅಬ್ಬೇನಹಳ್ಳಿ ಗ್ರಾ.ಪಂ. ಮಟ್ಟದ ಗಣಿತ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಶಿಕ್ಷಣ ಇಲಾಖೆ ಗಣಿತ ಕಲಿಕಾ ಆಂದೋಲನ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಗ್ರಾಮಕ್ಕೆ ಮತ್ತು ಶಾಲೆಗೆ ಕೀರ್ತಿ ತರಬೇಕು ಎಂದರು.

ಇನ್ನೂ ಕೊರಡಿಹಳ್ಳಿ ಮುಖಂಡ ಆನಂದಪ್ಪ ಮಾತನಾಡಿದರು ಗ್ರಾಮ ಪಂಚಾಯತಿ ಮಠದ ಶಾಲೆಗಳಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸಹ ನಮ್ಮ ಸಹಕಾರ ಇದ್ದೇ ಇರುತ್ತದೆ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನ ಕಲಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಇದೆ ವೇಳೆ ಗುಂತಕೋಲಮ್ಮನಹಳ್ಳಿ ಶಿಕ್ಷಕ ಜಿ ಎಂ ಜಯಣ್ಣ ಮಾತನಾಡಿದ ಅವರು ಸಮಾಜದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನವಿದೆ ವಿದ್ಯಾರ್ಥಿಗಳನ್ನು ಅಕ್ಷರಾಭ್ಯಾಸದ ಮೂಲಕ ಅಜ್ಞಾನದಿಂದ ಜ್ಞಾನದ ಕಡೆ ಕೊಂಡೊಯ್ಯುವಂತ ಮತ್ತು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಂತಹ ಶಕ್ತಿ ಶಿಕ್ಷಕರಿಗಿದೆ ವಿದ್ಯಾರ್ಥಿಗಳು ಶಿಕ್ಷಕರು ಹೇಳಿದ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು

ಇನ್ನೂ ಗಣಿತ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಪಾರಿತೋಷಕ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಲಾಯಿತು

ಈ ಕಾರ್ಯಕ್ರಮದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಅನಿತಾಮ್ಮ ಜಿ ಎಂ. ಜಯಣ್ಣ, ಮಲ್ಲೇಬೋರನಹಟ್ಟಿ ಸದಸ್ಯನಿ ಬೋರಮ್ಮ. ಸದ್ಯಸರಾದ ಶೇಖರಗೌಡ, ಪಡ್ಲ ಬೋರಣ್ಣ, ಪಿ ಒ ಸಣ್ಣೋಬಯ್ಯ, ಸಿಆರ್ ಪಿ ಪಾಲಯ್ಯ,ಎಸ್ ಡಿಎಂಸಿ ಅಧ್ಯಕ್ಷ ಗಾದ್ರಿಪಾಲಯ್ಯ, ಮಾಜಿ ಸದ್ಯಸ ಗಿಡ್ಡಬೋರಯ್ಯ, ಮಲ್ಲೇಬೋರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗಪ್ಪ, ಗ್ರಾಮಸ್ಥರಾದ ರುದ್ರಪ್ಪ, ಆರ್ ಡಿ ಮಲ್ಲಯ್ಯ, ಮುಸ್ಟಲಗುಮ್ಮಿ ಶಾಲೆಯ ಮುಖ್ಯ ಶಿಕ್ಷಕ ಜೆ ಕೃಷಪ್ಪ, ಅಂಗವಾಡಿ ಶಿಕ್ಷಕಿ ಉಮಾದೇವಿ, ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು

Namma Challakere Local News
error: Content is protected !!