ಚಳ್ಳಕೆರೆ : ಬಂಜಾರ ಜನಾಂಗ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನ ಪಡೆದಿದೆ ಹೀಗಾಗಿ ಎಲ್ಲಿ ಈ ಜನಾಂಗದ ಜನರಿರುವರು ಅಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಯೂರಿರುತ್ತದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು


ಅವರು ತಾಲೂಕಿನ ಮನಮೈನೆಟ್ಟಿ ಗ್ರಾಮದಲ್ಲಿ (ತೀಜ್)ಗೋದಿ ಹಬ್ಬದ ಪ್ರಯುಕ್ತ ಬಂಜಾರ ಸಮುದಾಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಸೇವಾಲಾಲ್ ಭಗವಾನರು ಈ ಸಮಾಜಕ್ಕೆ ಒಂದು ಐತಿಹಾಸಿಕವಾದ ಹಿನ್ನೆಲೆಯನ್ನು ಒದಗಿಸುತ್ತಾರೆ ಅವರ ಜೀವಿತ ಕಾಲದಲ್ಲಿ ಜನಾಂಗದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಸಮಾಜವನ್ನು ಮುನ್ನೆಲೆಗೆ ತೆಗೆದುಕೊಂಡು ಹೋದಂತೆ ಕೀರ್ತಿ ಅವರಿಗೆ ಸಲ್ಲುತ್ತದೆ.


ಇವತ್ತು ಪರಿಶಿಷ್ಟ ಜಾತಿ ಅವರಲ್ಲಿ ಈ ಜನಾಂಗ ಅತ್ಯಂತ ವೇಗವಾಗಿ ಸಾಮಾಜಿಕ ಬದಲಾವಣೆಯನ್ನು ಕಂಡಿದೆ ಇವತ್ತು ಈ ಜನಾಂಗವು ಹಳೆ ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವುದರಿಂದ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ತಮ್ಮ ಮಕ್ಕಳನ್ನು ಪೈಪೋಟಿಗೆ ಅಣಿಗೊಳಿಸಿದ್ದಾರೆ ಏನೇ ಆದರೂ ಸಂಪ್ರದಾಯವನ್ನು ಯಾವ ಜನಾಂಗವು ಮರೆಯಬಾರದು ಇದರ ಜೊತೆಗೆ ಆಧುನಿಕ ಬದುಕಿಗೆ ಅಗತ್ಯವಾದ ಜ್ಞಾನವನ್ನು ಕೌಶಲ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಮುಂದಿನ ದಿನಗಳಲ್ಲಿ ಈ ಜನಾಂಗದವರು ತಮ್ಮ ಮಕ್ಕಳಿಗೆ ಅಗತ್ಯವಾದಂತಹ ಉನ್ನತ ಶಿಕ್ಷಣವನ್ನು ನೀಡುವ ಜೊತೆಗೆ ಆಧ್ಯಾತ್ಮಿಕ ಸ್ಪರ್ಶವನ್ನು ಒದಗಿಸಬೇಕೆಂದು ಮನವಿ ಮಾಡಿದರು.


ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ರಾಮರೆಡ್ಡಿ ಮಾತನಾಡಿ ಈ ಸಮಾಜವು ಸಂಪ್ರದಾಯವನ್ನು ಮುಂದುವರಿಸಿಕೊಂಡ ಹೋಗುತ್ತಿರುವುದು ಸಂತಸ ವಿಚಾರ ಇವತ್ತಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳು ಧರಿಸಿ ಇರುವಂತಹ ಸಂಪ್ರದಾಯದ ಉಡುಗೆಗಳು ಕಣ್ಮನ ಸೆಳೆಯುತ್ತವೆ ಸರ್ಕಾರವು ಕೊಡು ಮಾಡುವಂತಹ ಎಲ್ಲಾ ಸೌಲಭ್ಯಗಳನ್ನು ಈ ಸಮಾಜದವರು ಆರ್ಥಿಕವಾಗಿ ಪಡೆದು ಮುಂದೆ ಬರಬೇಕೆಂದು ಆಶೀಸಿದರು.


ಈ ಸಮಾರಂಭದಲ್ಲಿ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಶಿವಣ್ಣ, ಬಿಜೆಪಿ ಮುಖಂಡ ಮೋಹನ್, ಗ್ರಾಮ ಪಂಚಾಯತಿ ಸದಸ್ಯ ನಿರಂಜನ್, ವಿಷ್ಣು ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!