ಚಳ್ಳಕೆರೆ : ಮೇ.24 ರ ಮಂಗಳವಾರ ನಿನ್ನೆ ರಾತ್ರಿ ಹಿರಿಯೂರು ಮಾರ್ಗ ಮಧ್ಯೆ ಆಕಸ್ಮಿಕವಾಗಿ ನಡೆದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಾರು ಅಪಘಾತಕ್ಕೆ ಈಡಾಗಿದ್ದು ಅದೃಷ್ಟವಶಾತ್ ಶಾಸಕರು ಹಾಗೂ ಅಪಘಾತಕ್ಕೀಡಾದ ಮತ್ತೊಂದು ಕಾರಿನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇಂದು ಶಾಸಕ ಟಿ.ರಘುಮೂರ್ತಿ ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಸಾರ್ವಜನಿಕರು, ಕಾರ್ಯಕರ್ತರು ಸೇರಿದಂತೆ ನೂರಾರು ಅಭಿಮಾನಿಗಳು ಶಾಸಕರ ಆರೋಗ್ಯ ಭಾಗ್ಯಕ್ಕಾಗಿ ಚಳ್ಳಕೆರೆ ನಗರದಲ್ಲಿರುವ ಚಳ್ಳಕೆರೆಮ್ಮ ಹಾಗೂ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಹಾಗೂ ಅವರ ಕುಟುಂಬವು ಪೂಜಾ ಕಾರ್ಯದಲ್ಲಿ ಭಾಗವಹಿಸಿ ನಂತರ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.