ಚಳ್ಳಕೆರೆ :
ಹೈವೆಯ ಒಂದು ಭಾಗ ಸಂಪೂರ್ಣ ಬಂದ್
ಮಾಡಲಾಗುತ್ತದೆ
ಹಿರಿಯೂರಿನ ಜವನಗೊಂಡನಹಳ್ಳಿಯ ಹೈವೇ ಯುದ್ದಕ್ಕೂ
ಮಾನವ ಸರಪಳಿ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ
ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಅವರು ಅಂತರ
ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಮಾನವಸರಪಳಿ
ಕಾರ್ಯಕ್ರಮದ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಾ, ಹೈವೆಯ
ಒಂದು ಬದಿಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಜಿಲ್ಲೆಯ
ಎಲ್ಲಾ ಸಂಘ ಸಂಸ್ಥೆಗಳು, ಶಾಲಾ ಕಾಲೇಜ್ ಗಳಿಗೂ ಭಾಗವಹಿಸಲು
ಮನವಿಯನ್ನು ಮಾಡಿದ್ದೇವೆ ಎಂದರು.