ಚಳ್ಳಕೆರೆ :
ಸೈಕಲ್ ನಲ್ಲಿ ಹೊರಟ ಯುವಕರಿಂದ ಉತ್ತಮ ಸಂದೇಶ
ಇತ್ತೀಚಿಗೆ ಮನುಷ್ಯರು ಶ್ರಮ ವಹಿಸದೆ ನಾನಾ ಕಾಯಿಲೆಗಳಿಗೆ
ತುತ್ತಾಗುತ್ತಿದ್ದಾರೆ.
ಮೊದಲೆಲ್ಲ ಕೆಲಸಗಳನ್ನು ಮಾಡಿ ದೇಹ ದಂಡಿಸಿ
ಆರೋಗ್ಯವಂತರಾಗುತ್ತಿದ್ದರು. ಸೈಕಲ್ ನಲ್ಲಿ ಯುವಕ ಸಮಾಜಕ್ಕೆ
ಉತ್ತಮ ಸಂದೇಶ ಸಾರಲು ಹೊರಟಿರುವುದು ಉತ್ತಮವಾದ ಕೆಲಸ
ಎಂದು ನೇತಾಜಿ ಸ್ನೇಹ ಬಳಗದ ನೇತಾಜಿ ಪ್ರಸನ್ನ ಹೇಳಿದರು.
ಚಳ್ಳಕೆರೆ
ನಗರದಲ್ಲಿ ಕಡಪದಿಂದ ಗೋವಾಕ್ಕೆ ಹೊರಟ ಯುವಕನನ್ನು ಶಾಲು
ಹಾಕಿ ಸನ್ಮಾನಿಸುವ ಮೂಲಕ ಅಭಿನಂದಿಸಿ ಮಾತನಾಡಿ,
ನಾವು ಇತ್ತೀಚಿಗೆ
ಸೋಮಾರಿಗಳಾಗುತ್ತಿದ್ದು ಇಂಧನಗಳಿಗೆ ಉಸಿರು ಶ್ರಮಪಡದೆ
ಓಡಾಡುತ್ತೇವೆ ಎಂದರು.
ಇದೇ ಸಂಧರ್ಭದಲ್ಲಿ ನೇತಾಜಿ ಪ್ರಸನ್ನ ಕುಮಾರ್, ಆರ್.ಪ್ರಸನ್ನ ಕುಮಾರ್, ಬಿ.ಪರೀದ್ ಖಾನ್ , ಇತರರು ಇದ್ದರು.