ಚಳ್ಳಕೆರೆ :
7 ನೇ ವೇತನ ಆಯೋಗಕ್ಕೆ ನಮ್ಮನ್ನು ಪರಿಗಣಿಸಿ
ನಿವೃತ್ತ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದಲ್ಲಿ
ಅನ್ಯಾಯವಾಗಿದ್ದು, ಅದನ್ನು ಸರ್ಕಾರ ಸರಿಪಡಿಸಬೇಕೆಂದು ನಿವೃತ್ತ
ಸರ್ಕಾರಿ ನೌಕರ ಸಂಘದ ಜಿಲ್ಲಾ ಪ್ರಧಾನ ಸಂಚಾಲಕ ರಾಜಣ್ಣ
ಒತ್ತಾಯಿಸಿದರು.
ಅವರು ಚಿತ್ರದುರ್ಗ ದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡುತ್ತಾ, ರಾಜ್ಯದಾದ್ಯಂತ ನಾವು 17 ಸಾವಿರ ಜನರಿದ್ದೇವೆ.
2022_ 23 ರ ಮಧ್ಯೆ ನಾವು ಸೇವೆಯಿಂದ ನಿವೃತ್ತ ರಾಗಿದ್ದೇವೆ,
ಆದರೂ ನಮ್ಮನ್ನು ಪರಿಗಣಿಸಿಲ್ಲ. ನಮ್ಮನ್ನು ಸರ್ಕಾರ ಪರಿಗಣಿ
ನ್ಯಾಯ ಕೊಡುವಂತೆ ಮನವಿ ಮಾಡಿದರು.