ಚಳ್ಳಕೆರೆ :
ಹುಬ್ಬಳ್ಳಿ – ಚಿಕ್ಕಜಾಜೂರು ರೈಲನ್ನು ಚಿತ್ರದುರ್ಗದವರೆಗೆ
ವಿಸ್ತರಿಸಿ
ಗುಂತಕಲ್ಲಿನಿಂದ ಹೊಳಲ್ಕೆರೆಯ ಚಿಕ್ಕಜಾಜೂರುವರೆಗೆ
ಸಂಚರಿಸುವ ರೈಲನ್ನು ಹುಬ್ಬಳ್ಳಿವರೆಗೆ ಹಾಗೂ ಹುಬ್ಬಳ್ಳಿಯಿಂದ
ಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಚಿತ್ರದುರ್ಗದವರೆಗೆ
ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಗೋವಿಂದ
ಕಾರಜೋಳ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ರೈಲ್ವೆ
ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತಾಡಿದರು.
ಈಗಾಗಲೇ ರೈಲ್ವೆ
ಇಲಾಖೆಯನ್ನು ಪ್ರಯಾಣಿಕರ ಬಳಿ ತೆಗೆದುಕೊಂಡು ಹೋಗುವುದು
ಅಧಿಕಾರಿಗಳಾದ ತಮ್ಮೆಲ್ಲರ ಕರ್ತವ್ಯ ಎಂದರು.