ಚಳ್ಳಕೆರೆ :
ದ್ವಿಪಥ ರೈಲ್ವೆ ಮಾರ್ಗಕ್ಕೆ ಸಚಿವರಿಂದ ಅನುಮೋದನೆ
ಕೊಡಿಸಲಾಗುವುದು
ಹೊಳಲ್ಕೆರೆ ಚಿಕ್ಕಜಾಜೂರು- ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿವರೆಗಿನ
185 ಕಿ. ಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ರೂ. 3, 341
ಕೋಟಿ ವೆಚ್ಚದಲ್ಲಿ ದ್ವಿಪಥ ರೈಲ್ವೆ ಮಾರ್ಗ ನಿರ್ಮಿಸಲು ರೈಲ್ವೆ
ಸಚಿವರಿಂದ ಅನುಮೋದನೆ ಕೊಡಿಸಲಾಗುವುದು ಎಂದು ಸಂಸದ
ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಅವರು ಬೆಂಗಳೂರಿನ ನೈರುತ್ಯ ರೈಲ್ವೆ ವಲಯದ ಮುಖ್ಯ
ಆಡಳಿತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ
ತಿಳಿಸುತ್ತಾ, ಅಮೃತಾಪುರ ರೈಲ್ವೆ ನಿಲ್ದಾಣ ಹೊಸದಾಗಿ
ನಿರ್ಮಾಣವಾಗಲಿದೆ ಎಂದರು.