ಚಳ್ಳಕೆರೆ :
ನರೇಗಾ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳ ಹಾಗೂ ತಂಡ ಕಾಮಗಾರಿ ಪರೀಶಿಲನೆ ನಡೆಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಹಾಗೂ ಎನ್ ಮಹದೇವಪುರ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಕಡತ ಹಾಗೂ ಕಾಮಗಾರಿ ವೀಕ್ಷಣೆ ಮಾಡಿದರು.
ದೊಡ್ಡೇರಿ ಗ್ರಾ ಪಂ.
ಡಿ ಉಪ್ಪಾರಹಟ್ಟಿ ಗ್ರಾಮಕ್ಕೆ , ಜಿಪಂ. ಮುಖ್ಯಕಾರ್ಯನಿರ್ವಾಣಾಧಿಕಾರಿ ಎಸ್ ಜೆ. ಸೋಮಶೇಖರ್ , ಉಪಕಾರ್ಯದರ್ಶಿಗಳು, ತಾಪಂ.ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ , ತಾಪಂ,ಸಹಾಯಕ ನಿರ್ದೇಶಕರು(ನರೇಗಾ ) ಸಂತೋಷ್ ,
ಕಾಲುವೆ ಹೂಳೆತ್ತುವ ಕಾಮಗಾರಿಗೆ ಭೇಟಿ ನೀಡಿ ಕಾಮಗಾರಿ, ಕಡತ, ಹಾಗೂ ಜಾಬ್ ಕಾರ್ಡ್ ಪರಿಶೀಲನೆ ಮಾಡಿದರು.
ನಂತರ ಎನ್ ಮಹದೇವಪುರ ಗ್ರಾಮಪಂಚಾಯಿತಿಯ ಕಛೇರಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷ ರು ಹಾಗೂ ಸದಸ್ಯರೊಂದಿಗೆ ಚರ್ಚೆ ನಡೆಸಿದರು.
ಈ ಸಮಯದಲ್ಲಿ ಉಪ ಕಾರ್ಯದರ್ಶಿಗಳು, ಕಾರ್ಯನಿರ್ವಾಹಕ ಅಧಿಕಾರಿ ಗಳು ,ಸಹಾಯಕ ನಿರ್ದೇಶಕರು.ಜಿ.ಪಂನ ಎ.ಡಿ.ಪಿ.ಸಿ, ತಾಲ್ಲೂಕು ತಾಂತ್ರಿಕ,ಐ.ಇ.ಸಿ ಸಂಯೋಜಕರು, ಪಿ.ಡಿ.ಓ, TAE,ಬಿ.ಎಫ್.ಟಿ,ಗ್ರಾಮ ಕಾಯಕ ಮಿತ್ರ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.