ಚಳ್ಳಕೆರೆ :
ಅತ್ಯಾಚಾರಿಗಳನ್ನು ಶಿಕ್ಷಿಸಿ: ವೈದ್ಯಕೀಯ ವಿದ್ಯಾರ್ಥಿಗಳ
ಪ್ರತಿಭಟನೆ
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ
ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ
ಕೇಂದ್ರದ ವಿದ್ಯಾರ್ಥಿಗಳು, ವೈದ್ಯರು ಹಾಗೂ ರೋಟರಿ ಕ್ಲಬ್ ನ
ಸದಸ್ಯರು, ಆರ್ ಜಿ ಕರ್ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿಯ
ಅತ್ಯಾಚಾರಿಗಳನ್ನು ಬಂಧಿಸಿ ಶಿಕ್ಷಸಬೇಕೆಂದು ಒತ್ತಾಯಿಸಿ
ಪ್ರತಿಭಟನೆಯನ್ನು ನಡೆಸಿದರು.
ಅತ್ಯಾಚಾರಿಗಳನ್ನು ಇದುವರೆಗೂ
ಬಂಧಿಸಿಲ್ಲ. ಇದರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ.
ಕೂಡಲೇ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆಯನ್ನು
ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಪ್ರವಾಸಿ
ಮಂದಿರದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ
ನಡೆಸಿದರು.