ವರವ ನೀಡು ದೇವಿ ವರವ ನೀಡು ಗೌರಸಮುದ್ರ ಮಾರಮ್ಮ ದೇವಿ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ .
ತಳಕು:: ಮಧ್ಯ ಕರ್ನಾಟಕದ ಬುಡಕಟ್ಟು ಸಂಸ್ಕೃತಿ ಆರಾಧ್ಯ ದೇವತೆ ಗೌರಸಮುದ್ರ ಮಾರಮ್ಮ ದೇವಿಯ ಕುರಿತು ಭಕ್ತಿಗೀತೆ ಧ್ವನಿ ಸುರುಳಿ ಮಾಡಲಾಯಿತು.
ಬುಧವಾರ ಹೋಬಳಿಯ ಗೌರಸಮುದ್ರ ಗ್ರಾಮದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ದೇವಾಲಯದಲ್ಲಿ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ರವರ ಸಾಹಿತ್ಯ ಸಂಗೀತ ರಚನೆಯ ವರವ ನೀಡು ದೇವಿ ವರವ ನೀಡು ಎಂಬ ಭಕ್ತಿ ಗೀತೆಯ ದನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಅವರು ಬುಡಕಟ್ಟು ಸಂಸ್ಕೃತಿ ಜನರ ಆರಾಧ್ಯ ದೇವತೆ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಕುರಿತು ಭಕ್ತಿ ಗೀತೆಯನ್ನು ನನ್ನ ತಂದೆ ನಲಗೇತನಹಟ್ಟಿ ಕಾಳೇ ತಿಪ್ಪೇಸ್ವಾಮಿ. ತಾಯಿ ರಾಮಕ್ಕ ರವರ ಆಶೀರ್ವಾದದೊಂದಿಗೆ ಸ್ವಂತ ಸಾಹಿತ್ಯ ಮತ್ತು ಸಂಗೀತ ರಚನೆ ಗಾಯನ ಮೂಲಕ ಚಳ್ಳಕೆರೆ ಉದ್ಯಮಿ ಜಿ ಪಿ ನವೀನಣ್ಣ ಅವರ ಸಹಕಾರದೊಂದಿಗೆ ನನ್ನ ಮೊದಲ ಭಕ್ತಿ ಗೀತೆ ಹಾಡಿ ಧ್ವನಿಸುರುಳಿ ಬಿಡುಗಡೆ ಮಾಡಲಾಗಿದೆ ಎಂದರು.
ಇದೇ ವೇಳೆ ಗೌರಸಮುದ್ರ ಗ್ರಾಮದ ಯುವಕ ಅಭಿಷೇಕ್ ಮಾತನಾಡಿದರು ರಂಗಭೂಮಿ ಕಲಾವಿದರಾದ ನಲಗೇತನಹಟ್ಟಿ ಗಾಯಕ ಕೆ ಟಿ ಮುತ್ತುರಾಜ್ ಗ್ರಾಮೀಣ ಪ್ರದೇಶದ ಉತ್ತಮ ಪ್ರತಿಭೆವುಳ್ಳ ಪ್ರತಿಭಾವಂತ ಗಾಯಕ ಮಾರಮ್ಮ ದೇವಿಯ ಕುರಿತು ಭಕ್ತಿಗೀತೆ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿರುವುದರಿಂದ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಆಶೀರ್ವಾದ ಅವರ ಮತ್ತು ಅವರ ಕುಟುಂಬದ ಮೇಲೆ ಸದಾ ಕಾಲ ಇರಲಿ ಇಂತಹ ನೂರಾರು ಭಕ್ತಿಗೀತೆಗಳ ಹಾಡುವ ಶಕ್ತಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಕರುಣಿಸಲಿ ಎಂದು ಗೌರಸಮುದ್ರ ಗ್ರಾಮದ ಸಮಸ್ತ ಊರಿನ ಗ್ರಾಮಸ್ಥರು ಪರವಾಗಿ ಶುಭ ಹಾರೈಸಿ ನಲಗೇತನಹಟ್ಟಿ ಗಾಯಕ ಕೆ.ಟಿ.ಮುತ್ತುರಾಜ್ ರವರಿಗೆ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಗೌರಸಮುದ್ರ ಮಾರಮ್ಮ ದೇವಿಯ ಅರ್ಚಕರು ಗ್ರಾಮದ ಯುವಕರು ಗ್ರಾಮಸ್ಥರು ಅಭಿಮಾನಿಗಳು ಕಲಾವಿದರು ಇದ್ದರು