ಶಿಕ್ಷಕ ವೃತ್ತಿಜೀವನ ಸಾರ್ಥಕ ಪಡಿಸಿಕೊಳ್ಳಲು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಶಿಕ್ಷಕರಿಗೆ ಸೂಚನೆ.

ನಾಯಕನಹಟ್ಟಿ: ಆಗಸ್ಟ್ 29 . ಪ್ರತಿಯೊಬ್ಬ ಮಕ್ಕಳಲ್ಲಿ ಅಡಗಿರುವಂಥ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಎನ್ನುವುದು ಇಂತಹ ವೇದಿಕೆಯ ಮೂಲಕ ಮಕ್ಕಳಲ್ಲಿ ಅಡಿಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್ ಸುರೇಶ್ ಹೇಳಿದ್ದಾರೆ.

ಗುರುವಾರ ಹೋಬಳಿ ಎನ್ ಮಹದೇವಪುರ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 2024 -25 ನೇ ಸಾಲಿನ ಎನ್ ಮಹದೇವಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಪ್ರಮುಖ ಘಟ್ಟವಾಗಿದೆ.
ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಹೊರ ತೆಗೆಯಲು ಇಂತಹ ಸುಸಜ್ಜಿತ ವೇದಿಕೆ ಪ್ರಮುಖವಾಗಿದೆ ಇಂತಹ ಪ್ರತಿಭೆಗಳು ಅರಳಬೇಕು ಇಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಆದ್ದರಿಂದ ಶಿಕ್ಷಕರನ್ನು ನಂಬಿ ಇಲಾಖೆ ಇಷ್ಟೆಲ್ಲ ಜವಾಬ್ದಾರಿ ತೆಗೆದುಕೊಂಡಿದೆ ಸಾರ್ವಜನಿಕರು ಸಹ ತುಂಬಾ ವಿಶ್ವಾಸವಿಟ್ಟಿದ್ದಾರೆ ಕರ್ತವ್ಯದ ಭಾಗವಾಗಿ ನಮ್ಮ ಮೌಲ್ಯವಿತವಾದ ಸೇವೆ ಒದಗಿಸುವ ಮೂಲಕ ನ್ಯಾಯ ಒದಗಿಸಲು ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗಬೇಕು ಎಲ್ಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಕರಾತ್ಮಕ ಅರ್ಹತೆ ಇದೆ ಶಿಕ್ಷಕರು ಇದನ್ನು ರೂಡಿಸಿಕೊಳ್ಳಬೇಕು .
ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಸೃಜನಾಶೀಲತೆಯನ್ನು ಹೊರ ತರಲು ಈ ಪ್ರತಿಭಾ ಕಾರಂಜಿಯು ಸಹಾಯಕವಾಗಿದೆ ಇದು ಮಕ್ಕಳಿಗೆ ಪಠ್ಯ ಪೂರಕವಾಗಿದೆ. ಎಂದರು.

ಇನ್ನೂ ಇದೇ ವೇಳೆ ಪ್ರಾಸ್ತಾವಿಕ ನುಡಿಯನ್ನು ಎನ್ ಮಹದೇವಪುರ ಕ್ಲಸ್ಟರ್ ಮಟ್ಟದ ಸಿ ಆರ್ ಪಿ .ಸಿ. ಹನುಮಂತಪ್ಪ ಮಾತನಾಡಿದರು. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಇಂಥ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ಮಾಡುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸಲು ಮುಂದಾಗಬೇಕು ಎನ್ ಮಹದೇವಪುರ ಕ್ಲಸ್ಟರ್ ಮಟ್ಟದ ಸತತ ಒಂಬತ್ತು ವರ್ಷಗಳ ಕಾಲ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಲ್ಲಾ ಶಿಕ್ಷಕ ಶಿಕ್ಷಕಿರಿಗೆ ಕೃತಜ್ಞತೆಗಳನ್ನು ತಿಳಿಸಿದರು

ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎನ್ ಮಹದೇವಪುರ ಕ್ಲಸ್ಟರ್ ಮಟ್ಟದ 17 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇನ್ನು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಛದ್ಮ ವೇಷ, ಭಕ್ತಿ ಗೀತೆ, ಚಿತ್ರಕಲೆ, ಆಶುಭಾಷಣ, ಕ್ಲೂ ಮಾಡಲಿಂಗ್, ದೇಶಭಕ್ತಿ ಗೀತೆ ಮಿಮಿಕ್ರಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಇದೇ ಸಂದರ್ಭದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ವಿ ಶಿಲ್ಪ, ಸಿಆರ್ ಪಿ ಲಿಂಗರಾಜ್, ಆರ್ ಈಶ್ವರಪ್ಪ, ಆರ್ ಸುರೇಶ್ ,ರಾಜ್ಯ ಪರಿಷತ್ ಸದಸ್ಯ ಎನ್ ಪಿ ಎಸ್ ನೌಕರ ಸಂಘದ ಪಾಟೀಲ್, ಎನ್ ದೇವರಹಳ್ಳಿ ಮುಖ್ಯ ಶಿಕ್ಷಕ ಬಸವರಾಜ್ ಹುರಿಗಡ್ಲ, ತಿಮ್ಮಪ್ಪಯ್ಯನಹಳ್ಳಿ ಮುಖ್ಯ ಶಿಕ್ಷಕಿ ಕೆ. ತಿಪ್ಪಮ್ಮ, ಎನ್ ಗೌರಿಪುರ ಮುಖ್ಯ ಶಿಕ್ಷಕ ಜಿ.ಎಸ್ ಉಮಾಪತಿ, ಗಜ್ಜುಗಾನಹಳ್ಳಿ ಮುಖ್ಯ ಶಿಕ್ಷಕ ಬೊಮ್ಮಲಿಂಗಯ್ಯ. ರಾಮಸಾಗರ ಮುಖ್ಯ ಶಿಕ್ಷಕ ಜಿ ಟಿ ತಿಪ್ಪೇಸ್ವಾಮಿ, ಎನ್‌ಬಿ ಕಾಲೋನಿ ಮುಖ್ಯ ಶಿಕ್ಷಕ ವೀರಭದ್ರ ಚಾರಿ, ಕುದಾಪುರ ಪಿ.ವಿ. ಕೃಷ್ಣಪ್ಪ , ಆರ್ ಚಂದ್ರಣ್ಣ ನಿರ್ದೇಶಕರು ಎನ್ ಜಿ ಒ, ಓಬಯ್ಯನಹಟ್ಟಿ ಗೊಲ್ಲರಹಟ್ಟಿ ಮುಖ್ಯ ಶಿಕ್ಷಕ ಒ.ಬಿ.ನಾಗರಾಜ್, ಕುದಾಪುರ ಲಂಬಾಣಿಹಟ್ಟಿ ಮುಖ್ಯ ಶಿಕ್ಷಕ ಆರ್ ರಾಜ ನಾಯ್ಕ ಸೇರಿದಂತೆ ಎನ್ ಮಹದೇವಪುರ ಕ್ಲಸ್ಟರ್ ಮಟ್ಟದ ಶಿಕ್ಷಕ- ಶಿಕ್ಷಕಿಯರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು

Namma Challakere Local News
error: Content is protected !!