ತಾಲೂಕು ಪಂಚಾಯಿತಿ ವತಿಯಿಂದ ಕಡ್ಡಾಯ ಶಿಕ್ಷಣ ತರಬೇತಿ

ಚಳ್ಳಕೆರೆ
ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಪಡೆಯಬೇಕು ಎಂದು EO ಶಶಿಧರ್ ತಿಳಿಸಿದರು

ಇವರು ನಗರದ ತಾಲೂಕು ಪಂಚಾಯತಿಯಲ್ಲಿ ಆಯೋಜಿಸಿರುವ ಉಚಿತ ಕಡ್ಡಾಯ ಶಿಕ್ಷಣ ಅಭಿಯಾನಕ್ಕೆ ಚಾಲನೆ ನೀಡಿ ಸಸಿಗೆ ನೀರು ಹಾಕುವ ಮೂಲಕ ಮಾತನಾಡಿದ ಅವರು,

ನಮ್ಮ ದೇಶದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಕಲಿತು ತಮ್ಮ ಜೀವನ ರೂಪಿಸಿಕೊಳ್ಳಿ ಅಲ್ಲದೆ ನಮ್ಮ ದೇಶವು ಸಂವಿಧಾನ ರಚಿಸಿ 75 ವರ್ಷ ಕಳೆದರೂ ನೂರಕ್ಕೆ 75ರಷ್ಟು ವಿದ್ಯಾವಂತರಾಗಿದ್ದಾರೆ ಇನ್ನು 25% ಅವಿದ್ಯವಂತರಾಗಿದ್ದಾರೆ,

ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರು ಅನಕ್ಷರಸ್ಥರ ಸಂಖ್ಯೆ 32% ಇರುತ್ತದೆ ನಾವು ಶಿಕ್ಷಣವನ್ನು ಮೂಲಭೂತವಾಗಿ ತೆಗೆದುಕೊಂಡು ಶಿಕ್ಷಣದ ಕಡೆ ಒತ್ತು ಕೊಟ್ಟರೆ ಹೆಚ್ಚಿನ ಜ್ಞಾನ ಲಭಿಸುತ್ತದೆ ನಾವು ಶಿಕ್ಷಣ ಪಡೆಯದೇ ಇದ್ದರೆ ಸಮಾಜ ನಮ್ಮನ್ನು ತುಳಿದು ಹಾಕುತ್ತದೆ, ಈ ಹಿನ್ನಲೆಯಲ್ಲಿ ಕೆಲವು ಗ್ರಾಮಾಂತರ ಪ್ರದೇಶದಲ್ಲಿ ಜನಸಾಮಾನ್ಯರು ಮೌಢ್ಯತೆಗೆ ಒಳಗಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ ಅಲ್ಲದೆ ನಮ್ಮ ಘನ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಶಿಕ್ಷಣವನ್ನು ಕಲಿಸಿರಿ ಎಂದು ಪ್ರೋತ್ಸಾಹಿಸುತ್ತದೆ ಈ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತದೆ ಈ ತರಬೇತಿಯಲ್ಲಿ ವೃದ್ಧರು ಅವಿದ್ಯಾವಂತರು ಅನಕ್ಷರಸ್ಥರು ಭಾಗಿಯಾಗಿ ಶಿಕ್ಷಣದ ಮೌಲ್ಯವನ್ನು ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು

ಇನ್ನು ಈ ಸಂದರ್ಭದಲ್ಲಿ ಏ,ಡಿ, ಸಂಪತ್ ಕುಮಾರ್, EO ಶಶಿಧರ್, ಇನ್ನು ತರಬೇತಿದಾರರು ಹಾಜರಿದ್ದರು

About The Author

Namma Challakere Local News
error: Content is protected !!