ಚಳ್ಳಕೆರೆ :
ಮಧ್ಯಾಹ್ನದ ಮಾರಿದೇವಿ ಜಾತ್ರೆ ಸೆ.3ರಂದು ಆರಂಭವಾಗಲಿರುವ‌ ನಿಮಿತ್ತ ಗೌರಸಮುದ್ರ ಮಾರಮ್ಮ ದೇವಿ ನೆಲೆಸಿರುವ ಸುತ್ತಲಿನ ಗ್ರಾಮದ ಭಕ್ತರು ಸಾರು ಹಾಕುವ ಮೂಲಕ ದೇವಿ ಜಾತ್ರೆಗೆ‌ ಅಧಿಕೃತವಾಗಿ ಚಾಲನೆ

ಚಳ್ಳಕೆರೆ : ಮಧ್ಯಾಹ್ನದ ಮಾರಿದೇವಿ ಜಾತ್ರೆ ಸೆ.3ರಂದು ಆರಂಭವಾಗಲಿರುವ‌ ನಿಮಿತ್ತ ಮಾರಮ್ಮ ದೇವಿ ನೆಲೆಸಿರುವ ಸುತ್ತಲಿನ ಗ್ರಾಮದ ಭಕ್ತರು ಸಾರು ಹಾಕುವ ಮೂಲಕ ದೇವಿ ಜಾತ್ರೆಗೆ‌ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಗೌರಸಮುದ್ರ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ದೇವಿಯ ಮೂಲ
ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎರಡು ವಾರದ ನಂತರ
ನಡೆಯಲಿರುವ ಮಾರಮ್ಮ ದೇವಿ ಜಾತ್ರೆಗೆ ಭಕ್ತರು ಕಟ್ಟುಪಾಡುಗಳನ್ನು
ಅನುಸರಣೆ ಮಾಡಲು ಸಾರು ಹಾಕಲಾಯಿತು.

ಮಧ್ಯಾಹ್ನ ಮಾರಮ್ಮ ಎಂದೇ ಮಧ್ಯ ಕರ್ನಾಟಕದಲ್ಲಿ ಹೆಸರು
ಪಡೆದಿರುವ ಗೌರಸಮುದ್ರ ಮಾರಮ್ಮನ ಜಾತ್ರೆ ಬುಡಕಟ್ಟು ಸಂಸ್ಕೃತಿ
ಪದ್ಧತಿಯಲ್ಲಿ ಆಚರಣೆ ಮಾಡುವ ವಾಡಿಕೆ ಈಗಲೂ ಇದೆ.

ಗ್ರಾಮದಲ್ಲಿ ಸಾರುಕಟ್ಟೆ ಸಂಸ್ಥಾಪಕರಾಗಿರುವ 7 ಕೋಟಿ ತಳವಾರ
ನಾಯಕರ ಸಮ್ಮುಖದಲ್ಲಿ ಜಾತ್ರೆಯ ಪೂರ್ವ ತಯಾರಿಗೆ ಸಭೆ
ನಡೆಸಿ‌.
ಸಾರುಕಟ್ಟೆಗೆ ಸೇರುವ 12 ಸಮುದಾಯಗಳ ಕೈವಾಡದಾವರು
ಭಾಗಿಯಾಗಿ ಮಾರಮ್ಮನ ಜಾತ್ರೆ ನಡೆಸಲು ಅಪ್ಪಣೆ ಕೋರಿದರು.

ಜಾತ್ರಾ ಕಾರ್ಯದ ಜವಾಬ್ದಾರಿ ನಿರ್ವಹಿಸುವ ನಮಗೆ ಏನು ಕೊಡುತ್ತೀರ
ಎಂದು ಕೇಳಿಕೊಳ್ಳಲಾಯಿತು. ಇದಕ್ಕೆ ತಳವಾರರು ಧವಸ-ಧಾನ್ಯ ಮತ್ತು
ಅಗತ್ಯ ಸಾಮಗ್ರಿಗಳು ಕೊಡಬೇಕಿದೆ ಎಂದು ಕೋರಿದರು.

‌ಯಾವೆಲ್ಲಾ ಗ್ರಾಮದಲ್ಲಿ ಸಾರು ಹರಕೆ :

ದೇವಿ ನೆಲೆಸಿದ‌ ಸ್ಥಳ ಗೌರಸಮುದ್ರ, ಹನುಮಂತನಹಳ್ಳಿ, ತಿಮ್ಮಾಪುರ, ಕೋನಸಾಗರ,
ಓಬಣ್ಣನಹಳ್ಳಿ, ಕೂತ್ತಾರಹಟ್ಟಿ, ಕೊಂಡ್ಲಹಳ್ಳಿ ಸೇರಿ ದೇವಿಯ
ಆರಾಧಕರಿರುವ ಊರುಗಳಲ್ಲಿ ಎರಡು ವಾರಗಳ ಕಾಲ ಮನೆಗಳಲ್ಲಿ
ಹೆಂಚು ಇಡಬಾರದು.

ಬಟ್ಟೆಗಳನ್ನು ಬದಲಿಸಬಾರದು. ಸ್ನಾನ ಮಾಡಬಾರದು ಎನ್ನುವ
ಕಟ್ಟುಪಾಡುಗಳನ್ನು ಅನುಸರಿಸಬೇಕು. ಹೀಗೆ ನಡೆದುಕೊಳ್ಳುವ ಭಕ್ತರ
ಗ್ರಾಮಗಳನ್ನು ದೇವಿ ಪ್ರವೇಶಿಸಿ ರಕ್ಷಿಸುತ್ತಾಳೆ. ಇದನ್ನು ಒಪ್ಪಿಕೊಂಡಿದ್ದೇವೆ
ಎನ್ನುವುದಕ್ಕೆ ನಾವು ತಯಾರಿಸಿರುವ ಸಾರು ಬಳಸಿಕೊಂಡು ಊಟ
ಮಾಡಬೇಕು ಎಂದು ಆಜ್ಞೆ ಮಾಡಿದರು.

ಹಿಂದಿನ ಕಾಲದಿಂದಲೂ ನಂಬಿದ ಪದ್ದತಿ :

ಬಳಿಕ ಸಾರುಕಟ್ಟೆಯ ತೀರ್ಮಾನದಂತೆ ತಳವಾರರು ತಯಾರಿಸಿದ ಸಾರು
ಪ್ರತಿ ಮನೆಗಳಿಗೆ ಹಂಚಿ, ಡಂಗೂರ ಸಾರುವ ಮೂಲಕ ಇನ್ನೆರೆಡು
ವಾರಗಳ ನಂತರ ನಡೆಯಲಿರುವ ಮಾರಮ್ಮ ದೇವಿ ಜಾತ್ರೆಗೆ
ಹರಕೆಯಂತೆ ಹಿರಿಯರು ಮಾಡಿಕೊಂಡು ಬಂದಿರುವ ಪದ್ಧತಿಗಳನ್ನು
ಅನುಸರಿಸಬೇಕು ಎಂದು ಜನರಿಗೆ ಸುದ್ದಿ ಮುಟ್ಟಿಸಲಾಯಿತು.

ತಳವಾರರು ಸೇರಿ ಗ್ರಾಮದ ಪ್ರತಿ ಸಮುದಾಯದ ಮುಖಂಡರು ಹಣ್ಣು-
ಕಾಯಿ, ಹೂವು, ಪೂಜಾ ಸಾಮಗ್ರಿಗಳೊಂದಿಗೆ ದೇವಿಯ ದೇವಸ್ಥಾನಕ್ಕೆ
ತೆರಳಿ ಪೂಜೆ ಸಲ್ಲಿಸಿ, ಈ ವರ್ಷದ ಜಾತ್ರಾ ಕಾರ್ಯವನ್ನು ಒಂದೊತ್ತಿನ
ಹರಕೆಯಂತೆ ಭಕ್ತಿ ಸಮರ್ಪಿಸಿ, ಯಾವುದೇ ಲೋಪವಾಗದಂತೆ ಯಶಸ್ವಿ
ಮಾಡಿಕೊಳ್ಳುತ್ತೇವೆ. ಇದಕ್ಕೆ ಕಂಕಣಬದ್ಧರಾಗಿದ್ದು, ನಿನ್ನ ಆಶೀರ್ವಾದ
ಬೇಕು ಎಂದು ದೇವಿಯನ್ನು ಬೇಡಿಕೊಳ್ಳಲಾಯಿತು.

About The Author

Namma Challakere Local News
error: Content is protected !!