ಮಳೆಹಾನಿ ಪ್ರದೇಶ ಮನಮೈಯ್ಯನಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ .
ನಾಯಕನಹಟ್ಟಿ:: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ತಡರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಮನಮೈಯ್ಯನಹಟ್ಟಿ ಗ್ರಾಮದ ಸುಮಾರು 80 ಮನೆಗಳಿಗೆ ನೀರು ನುಗ್ಗಿ ಮತ್ತು ರಾಷ್ಟ್ರೀಯ ಹೆದ್ದಾರಿ 45ರ ಚಳ್ಳಕೆರೆ ದಾವಣಗೆರೆ ರಸ್ತೆಯು ಮಳೆಯ ನೀರಿನಿಂದ ಸಂಚಾರ ಸ್ಥಗಿತವಾಗಿತ್ತು.
ಸುದ್ದಿ ತಿಳಿದ ಕೂಡಲೇ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ಕ್ರಮವಹಿಸಬೇಕು ಮನೆ ಹಾನಿ ಸಂಭವಿಸಿದಲ್ಲಿ ನೇಮಾನುಸಾರ ತ್ವರಿತವಾಗಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ್ ರೇಹಾನ್ ಪಾಷಾ, ಶಿರಸ್ತುದಾರ ಸದಾಶಿವಯ್ಯ, ನಾಡಕಚೇರಿ ಉಪತಾಶಿಲ್ದಾರ್ ಬಿ ಶಕುಂತಲಾ, ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ, ಸದಸ್ಯ ಶಿವಣ್ಣ, ಪಿಡಿಓ ರಾಘವೇಂದ್ರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಭಾಸ್ಕರ್ , ಇಂಜಿನಿಯರ್ ಅಕೀಂ, ಕಂದಾಯ ನಿರೀಕ್ಷಕ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಜಗದೀಶ್, ಹರೀಶ್, ಪುಷ್ಪಲತಾ, ನಾಯಕನಹಟ್ಟಿ ಪೊಲೀಸ್ ಠಾಣೆ ಎಎಸ್ಐ
ಆರ್ ತಿಪ್ಪೇಸ್ವಾಮಿ, ಪೊಲೀಸ್ ಪೇದೆ ರಾಮಾಂಜಿನಿ, ಗ್ರಾಮ ಸಹಾಯಕರಾದ ಚನ್ನಬಸಪ್ಪ ಓಬಣ್ಣ, ಕುಮಾರ್, ಹರೀಶ್, ಮನಮೈಯ್ಯನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು