ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಏಳಿಗೆಗಾಗಿ ಸಹಕಾರಿಯಾಗಿದೆ. ಅಧ್ಯಕ್ಷ ಮಾಳಜ್ಜಯ್ಯ.

ನಾಯಕನಹಟ್ಟಿ:: ಆಗಸ್ಟ್ 22. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತಾಪಿ ವರ್ಗದ ಅನುಕೂಲತೆಗೆ ತಕ್ಕಂತೆ ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಂಘದ ಸರ್ವ ಸದಸ್ಯರ ಸಾಕಾರ ಅತ್ಯಗತ್ಯ ಎಂದು ಅಧ್ಯಕ್ಷ ಮಾಳಜ್ಜಯ್ಯ ತಿಳಿಸಿದರು.

ಗುರುವಾರ ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ 2023- 24 ನೇ ಸಾಲಿನ 75ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಮಾಳಜ್ಜಯ್ಯ ಮಾತನಾಡಿದರು 2023-24ನೇ ಸಾಲಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘ 40 ಸಾವಿರ ಲಾಭದಾಯಕವಾಗಿದೆ. ಇನ್ನೂ ಗ್ರಾಮೀಣ ಪ್ರದೇಶದ ರೈತರು ಪಡೆದಂತ ಸಾಲವನ್ನು ಮರುಪಾವತಿ ಮಾಡದೇ ಇರುವುದು ಸಂಘಕ್ಕೆ ಅನುದಾನದ ಕೊರತೆಯಾಗಿದೆ ಕೂಡಲೇ ರೈತರು ಪಡೆದಂತ ಸಾಲವನ್ನು ಮರುಪಾವತಿಸಿ ಎಂದು ರೈತರಲ್ಲಿ ಮನವಿ ಮಾಡಿದರು.

ಇದೇ ವೇಳೆ ಮಾಜಿ ಅಧ್ಯಕ್ಷ ಜಿ ಓ. ಮಂಜಣ್ಣ ಮಾತನಾಡಿದ್ದಾರೆ. ಷೇರುದಾರ ರಿಂದ ಮಾತ್ರ ಡಿಸಿಸಿ ಬ್ಯಾಂಕ್ ಇತರೆ ಬ್ಯಾಂಕುಗಳು ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳು ಮುಂದಾಗಬೇಕು ವಿವಿಧ ಸಾಲ ಸೌಲಭ್ಯಗಳನ್ನು ನೀಡುವಂತಹ ಆಗಬೇಕು ಎಂದರು

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಉಪಾಧ್ಯಕ್ಷ ಬಿ ತಿಪ್ಪೇಸ್ವಾಮಿ, ನಿರ್ದೇಶಕರಾದ ಜಿ ಬಸವರಾಜ್, ಎ. ಟಿ. ಅಶೋಕ್ ರೇಖಲಗೆರೆ, ರಾಮಸಾಗರ ಪಿ.ಎಂ ಗೌಡ್ರು ಬಸವರಾಜ್, ಎಲ್ ಅಮರೇಶ್ ,ಎನ್ ಮೋತಿ ನಾಯ್ಕ, ಗುಂತಕೋಲಮನಹಳ್ಳಿ ಪುಟ್ಟಯ್ಯ, ಎಸ್ ಟಿ ತಿಪ್ಪೇಸ್ವಾಮಿ, ಶ್ರೀಮತಿ ತಿಪ್ಪಕ್ಕ, ಶ್ರೀಮತಿ ಕಾಮಕ್ಕ ,ಜಿ ವಿ ಸತೀಶ್, ಷೇರುದಾರರಾದ ಗುಂತಕೋಲಮ್ಮನಹಳ್ಳಿ ಚಂದ್ರಣ್ಣ, ಬೋರಯ್ಯ, ಸಣ್ಣೋಬಯ್ಯ, ತಿಪ್ಪೇಸ್ವಾಮಿ, ಬೋರಯ್ಯ,
ಮುಖ್ಯ ಕಾರ್ಯನಿರ್ವಾಣ ಅಧಿಕಾರಿ ಡಿ. ಬೋರಯ್ಯ, ಸಿಬ್ಬಂದಿ ಟಿ ಪ್ರದೀಪ್, ಪರ್ವತಯ್ಯ, ರೈತರು ಇದ್ದರು

Namma Challakere Local News
error: Content is protected !!