ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಪ್ರದೇಶದ ಬಡ ಜನರಿಗೆ ಬ್ಯಾಂಕಿನ ಸೌಲಭ್ಯ ಪಡೆಯಲು ವರದಾನವಾಗಿದೆ ಸಂಘ ಮಿತ್ರ ಮುಖ್ಯ ವ್ಯವಸ್ಥಾಪಕ ಎಂ ರಮೇಶ.

ನಾಯಕನಹಟ್ಟಿ:: ಆಗಸ್ಟ್ 19. ಪ್ರತಿಯೊಬ್ಬ ಠೇವಣಿದಾರರು ಆರ್ಥಿಕವಾಗಿ ಸದೃಢರಾಗಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಸೌಲಭ್ಯಗಳನ್ನು ತಿಳಿದುಕೊಳ್ಳಿ ಎಂದು ಸಂಘ ಮಿತ್ರ ಮುಖ್ಯ ವ್ಯವಸ್ಥಾಪಕ ಎಂ ರಮೇಶ್ ಹೇಳಿದರು
ಸೋಮವಾರ ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಧನ ಹಾಗೂ ಸಂಘ ಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ ಮತ್ತು ಮೈರಾಡ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಠೇವಣೆದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಸಿಗೆ ನೀರಿರುವುದು ಮಾತನಾಡಿದ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಜಾಗೃತಿ ಮೂಡಿಸಲು ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಜನರಿಗೆ ಸಾಲ ಸೌಲಭ್ಯಗಳ ನೀಡಲು ಮುಂದಾಗಿದೆ ಎಂದರು.

ಇದೇ ವೇಳೆ ಮಲ್ಲೂರಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚಕ್ರಪಾಣಿ ಮಾತನಾಡಿದರು. ಗ್ರಾಮೀಣ ಬ್ಯಾಂಕಿನಲ್ಲಿ ದೊರೆಯುವಂತಹ ಸಾಲ ಸೌಲಭ್ಯಗಳು ಮತ್ತು ಉಳಿತಾಯದ ಬಗ್ಗೆ ಸ್ವಸಹಾಯ ಸಂಘದ ಸದಸ್ಯರಿಗೆ ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಸಂಘ ಮಿತ್ರ ಸಂಸ್ಥೆ ವ್ಯವಸ್ಥಾಪಕ ಕೆ.ಎಂ. ಸುನಿಲ್ ಕುಮಾರ್, ವಾಮದೇವ್ ತರಬೇತಿದಾರರು. ಚಿತ್ರದುರ್ಗ ಮೈರಾಡ ಮುಖ್ಯಸ್ಥ ಶಿವಕುಮಾರ್, ಅಬ್ಬೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್, ಮೈರಾಡ ನಾಯಕನಹಟ್ಟಿ ಜೋಗಿಹಟ್ಟಿ ಜಿ.ಸಿ. ಬಾಲಯ್ಯ, ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕಿ ಟಿ ಒ. ಲಕ್ಷ್ಮಿ, ಸಂಪನ್ಮೂಲ ಕೇಂದ್ರದ ಕಾರ್ಯಕರ್ತ ಚೈತ್ರ ಮ್ಯಾಸರಹಟ್ಟಿ, ಸೇರಿದಂತೆ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಸ್ವ ಸಹಾಯ ಸಂಘದ ಪದಾಧಿಕಾರಿಗಳು ರೈತರು ಇದ್ದರು

About The Author

Namma Challakere Local News
error: Content is protected !!