ಚಳ್ಳಕೆರೆ :
ಟೊಮೊಟೊ ಬೆಳೆಗಾರರಿಗೆ ಕಹಿಯಾದ ಟೊಮೆಟೊ
ಬೆಲೆ
ಶ್ರಾವಣ ಮಾಸ ಆರಂಭವಾಗಿ ಸಾಲು ಸಾಲು ಹಬ್ಬಗಳು
ನಡೆಯುತ್ತಿದ್ದರೂ ಟೊಮೆಟೊ ಬೆಳೆಗಾರರಿಗೆ ಮಾತ್ರ ಈ ಮಾಸ
ಕಹಿಯಾಗಿಯೇ ಉಳಿದಿದೆ.
ತಾಲ್ಲೂಕಿನ ಹಲವು ಟೊಮೆಟೊ
ಬೆಳೆಗಾರರು, ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.
ಉತ್ಪಾದನೆಯಲ್ಲಿ
ಹೆಚ್ಚಳ, ವೈರಸ್ ಪಿಡುಗು ಮತ್ತು ಬಾಂಗ್ಲಾದೇಶದ ರಾಜಕೀಯ
ಬಿಕ್ಕಟ್ಟಿನ ಕಾರಣ ಅಲ್ಲಿಗೆ ರಫ್ತು ಮಾಡಲು ಆಗದಿರುವ
ಕಾರಣಗಳಿಂದಾಗಿ ಟೊಮೆಟೊ ಬೆಲೆ ತೀವ್ರವಾಗಿ ಕುಸಿದಿದೆ.
ಭಾಗದಲ್ಲಿ ಉತ್ತಮ ಬೆಲೆ ಕನಸು ಕಂಡಿದ್ದ ರೈತರಿಗೆ ಆಘಾತವಾಗಿದೆ.